ಪ್ರಾಮಾಣಿಕತೆ ಅನ್ನುವುದು ಮಣ್ಣು
ಪಾಲಾಗಿದೆ ಗಾಂಧಿತಾತ ಸತ್ಯ ಅಹಿಂಸೆಯಂತು
ಸತ್ತು ಹೋಗಿದೆ ಗಾಂಧಿತಾತ
ಕಾಮುಕರ ಅಟ್ಟಹಾಸಕೆ ಬಲಿಯಾಗಿವೆ
ಹೆಣ್ಣು ಜೀವಗಳು ಹಾಡು ಹಗಲೇ
ಕತ್ತಿ ನೆತ್ತರು ಕುಡಿದಿದೆ ಗಾಂಧಿತಾತ
ನ್ಯಾಯ ದೇವತೆಯ ಕಣ್ಣಿಗೆ ಮಣ್ಣು
ಬಿದ್ದಿದೆ ಗಾಂಧಿತಾತ ಶಾಂತಿಯು
ನೆಲವ ಬಿಟ್ಟು ಹಾಳಾಗಿ ಹೋಗಿದೆ ಗಾಂಧಿತಾತ
ಧರ್ಮ ಜಾತಿಯ ಜಾತ್ರೆ ಈಗಿಗಂತೂ
ಮೇರೆ ಮಿರಿವೆ ಗಲ್ಲಿಗಳಲಿ ನಿನ್ನ ತತ್ವ
ಯಾವಾಗಲೋ ಮಾರಾಟವಾಗಿದೆ ಗಾಂಧಿತಾತ
ಪಾರ್ಕು ಗಾರ್ಡನ್ ಗಳಲಿ ಮಾತ್ರ
ಒಬ್ಬಂಟಿಯಾಗಿ ನಿಂತಿ ಮರುಳ ದು:ಖಿಸುತ್ತಿದ್ದಾನೆ
ಇದೆಲ್ಲ ನೋಡಿ ನೋವಾಗಿದೆ ಗಾಂಧಿತಾತ
ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ