You are currently viewing ದಿವ್ಯ ಯೋಗಿನಿ

ದಿವ್ಯ ಯೋಗಿನಿ

ಹನ್ನೆರಡನೇ ಶತಮಾನದ ಪ್ರಥಮ ಮಹಿಳಾ ಕವಯತ್ರಿಯಿವರು
ಧವನದ ಹುಣ್ಣಿಮೆಯಂದು ಉಡುತಡಿ ಗ್ರಾಮದಲ್ಲಿ ಜನಿಸಿದವರು
ವಚನ ಸಾಹಿತ್ಯದ ಹಲವಾರು ವಚನಗಳ ರಚನೆಕಾರ್ತಿಯಿವರು
ಸ್ತ್ರೀ ವಾದಿ ಚಳುವಳಿಯ ಪ್ರತಿಪಾದಕಿ ಅಕ್ಕಮಹಾದೇವಿಯಿವರು

ಶಿವಶರಣೆ ಕನ್ನಡ ಸಾಹಿತ್ಯದ ಬಂಡಾಯ ಕವಿದಿಗ್ಗಜೆಯಿವರು
ಸ್ವಾತಿಕ ಕಳೆಯ ಸಾಕಾರಮೂರ್ತಿ ಅಪರೂಪದ ಮಹಿಳೆಯಿವರು
ಇಷ್ಟದೈವ ಚನ್ನಮಲ್ಲಿಕಾರ್ಜುನ ಅಂಕಿತನಾಮದವರು
ಚನ್ನಮಲ್ಲಿಕಾರ್ಜುನನ್ನು ತನ್ನ ಪತಿ ಎಂದು ಸ್ವೀಕರಿಸಿದವರು

ಶಿವನಾಮವನ್ನು ಮನದಲ್ಲಿ ಹಗಲು-ಇರುಳು ಬಿಡದೆ ಜಪಿಸುತ್ತಿದ್ದವರು
ಅರಸೋತ್ತಿಗೆಯ ಸಿರಿ- ಸಂಪದಕ್ಕೆ ತಲೆಬಾಗದೆ ವಿರಕ್ತೆಯಾದವರು
ಲೌಕಿಕ ಜಗತ್ತನ್ನು ಧಿಕ್ಕರಿಸಿ ಕೇಶಾಂಬರೆಯಾಗಿ ನಡೆದವರು
ಪ್ರಾಪಂಚಿಕ ವೈಭೋಗ ಮತ್ತು ಆಕರ್ಷಣೆಗಳನ್ನು ತ್ಯಜಿಸಿದವರು

ಲೋಕಾನುಭವ ಜ್ಞಾನ ಸಂಪನ್ನತೆ ಅಭಿವ್ಯಕ್ತಿ ಸಾಮರ್ಥ್ಯವುಳ್ಳವರು
ವಿಶ್ವ ಸ್ತ್ರೀ ಕುಲದ ಜ್ಯೋತಿ ದಿಟ್ಟೆ ಧೀರೆ ಧೀಮಂತ ಮಹಿಳೆಯಿವರು
ದೈವೀ ಶಕ್ತಿಯ ಆತ್ಮಬಲದಿಂದ ತನ್ನ ಗುರಿ ಸಾಧಿಸಿದವರು
ದಿವ್ಯ ಯೋಗಿನಿ ಮಹಾ ಶಿವಶರಣೆ ಅಕ್ಕ ಮಹಾದೇವಿಯಿವರು

🙏ಧನ್ಯವಾದ

ಪೂರ್ಣಿಮಾ ರಾಜೇಶ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ