SKU: 17393

ಧವಳ ಧಾರಿಣಿ

220.00

Author : ನಾರಾಯಣ ಯಾಜಿ

Publishers Name : ಯಾಜಿ ಪ್ರಕಾಶನ

Quantity

All India Shipping

Timely Arrival: 4-8 Days to Your Doorstep

Secure Payments

Safe and Secure: Your Payments Protected

Free Shipping

Above order amount: 499

share This book

Book Description

ನಾವು ಇಂದು ಮರೆತೇಬಿಟ್ಟಿರುವ ಪರಿಕಲ್ಪನೆಗಳಲ್ಲಿ ‘ಬಹುಶ್ರುತ’ ಎಂಬುದೂ ಒಂದು. ಹಿಂದಿನ ಕಾಲದ ಪುತಿನ, ಎ.ಎನ್.ಮೂರ್ತಿರಾವ್, ಕುವೆಂಪು ಮೊದಲಾದವರ ಪ್ರಬಂಧಗಳನ್ನು ಓದುವಾಗ ಈ ಬಹುಶ್ರುತತ್ವ ಅವರಲ್ಲಿ ಇರುವುದು ನಮಗೆ ಗೊತ್ತಾಗುತ್ತಿತ್ತು. ಬಹು ಮೂಲಗಳಿಂದ ಜ್ಞಾನವನ್ನು ಕ್ರೋಡೀಕರಿಸಿಕೊಂಡ ಮತ್ತು ಅದನ್ನು ಸೂಕ್ತ ಕಾಲದಲ್ಲಿ ಕೇಳುಗ-ಓದುಗರಿಗೆ ಮನಕ್ಕೆ ಹೋಗುವಂತೆ ರಸವತ್ತಾಗಿ ನೀಡಬಲ್ಲ ವ್ಯಕ್ತಿತ್ವ, ನಾರಾಯಣ ಯಾಜಿ ಅವರಲ್ಲಿ ಇಂಥ ಬಹುಶ್ರುತತ್ವವನ್ನು ನಾವು ಕಾಣಬಹುದು. ‘ಗೌತಮ ಬುದ್ಧ’ನ ಬಗ್ಗೆ ಬರೆಯುತ್ತ, ಧಮ್ಮಪದದ ಪಕ್ಕಿಣಕ ವಗ್ಗದಲ್ಲಿ ಬರುವ ಗೌತಮನ ಶ್ರಾವಕರ ಗುಣಗಳನ್ನೂ ಭಗವದ್ಗೀತೆಯಲ್ಲಿ ತಿಳಿಸಲಾಗಿರುವ ಸ್ಥಿತಪ್ರಜ್ಞನ ಗುಣಗಳನ್ನೂ ಅಕ್ಕಪಕ್ಕದಲ್ಲಿಟ್ಟು ನೋಡುವುದನ್ನು ಗಮನಿಸಬಹುದು. ಹಾಗೇ ‘ಕಾಳಿದಾಸನ ಅಭಿಜ್ಞಾನ’ ಬರಹದಲ್ಲಿ ಆತನ ಶಾಕುಂತಲ ನಾಟಕದ ಲಕ್ಷಣವನ್ನು, ಮಹಾಭಾರತದ ಮೂಲಕತೆಯನ್ನು ಹಾಗೂ ಪಾಶ್ಚಾತ್ಯ ವಿದ್ವಾಂಸ ಆರ್ಥರ್ ಬೆರ್ರಿಡೇಲ್ ಕೀತ್ ವೈದರ್ಭೀ ಶೈಲಿಯ ಬಗ್ಗೆ ನೀಡಿದ ಟಿಪ್ಪಣಿಗಳನ್ನು ಜೊತೆಯಾಗಿಟ್ಟು ವಿಶ್ಲೇಷಿಸು ವುದನ್ನು ಗಮನಿಸಬಹುದು. ಇಲ್ಲಿ ಯಾಜಿಯವರ ಓದಿನ ವ್ಯಾಪ್ತಿವಿಸ್ತಾರಗಳು ನಮಗೆ ಅರಿವಾಗುತ್ತವೆ.

ಆ ಮೂಲಕ ಗೊತ್ತಾಗುವುದೆಂದರೆ, ಲೇಖಕರು ತಕ್ಷಣ ರಂಜಿಸುವ ಮಾತುಗಳನ್ನು ಬರೆದು ವಿರಮಿಸುವುದರಲ್ಲಿ ಆಸಕ್ತರಲ್ಲ. ‘ಅಲ್ಪವಾದುದರಲ್ಲಿ ಸುಖವಿಲ್ಲ, ಭೌಮ ವಾದುದೇ ಸುಖ’ (ಯೋ ವೈ ಭೂಮಾ ತತ್ಸುಖಂ, ನಾಲ್ವೇ ಸುಖಮಸ್ತಿ) ಎಂಬ ಛಾಂದೋಗೋಪನಿಷತ್ತಿನ ಮಾತಿನಲ್ಲಿ ಯಾಜಿಯವರಿಗೆ ಅಚಂಚಲ ವಿಶ್ವಾಸ. ಓದಿ ಮುಗಿಸಿದ ಕೂಡಲೇ ಮಂಜಿನಂತೆ ಕರಗಿಹೋಗುವ ವಾಕ್ಯಗಳ ಬದಲು, ತುಸುಕಾಲ ನೆನಪಿನಲ್ಲಿ ಉಳಿಯುವ ವಿಚಾರಗಳು, ಮನರಂಜಿಸುವ ಗದ್ಯದ ಬದಲು ವಿಚಾರವೊಂದರ ವಿಶ್ವಾತ್ಮಕ ಆಯಾಮವನ್ನು ಹುಡುಕುವ ರಚನೆಗಳು ಎಂದು ಇವನ್ನು ಗ್ರಹಿಸಬಹುದು. ಅದರ ಜೊತೆಗೇ ‘ಯೋ ವೈ ಭೂಮಾ ತದಮೃತಂ, ಯದಲ್ಲಂ ತನ್‌ಮರ್ತಂ’ ಎಂಬ ಎಚ್ಚರ ಕೂಡ ಅವರಿಗೆ ಇದೆ.

-ಹರೀಶ್ ಕೇರ, ಪತ್ರಕರ್ತ

Rating This Book

Reviews

There are no reviews yet.

Be the first to review “ಧವಳ ಧಾರಿಣಿ”

Your email address will not be published. Required fields are marked *