ಜಾತ್ರಿ
₹290.00
Author : ಧರಣೇಂದ್ರ ಕುರಕುರಿ
Publishers Name : ಯಾಜಿ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಲೋಕಪ್ರಜ್ಞೆಯಲ್ಲಿ ತೆರೆದುಕೊಳ್ಳುವ ಬದುಕು ವರ್ತಮಾನದ ದ್ವಂದ್ವಗಳ ಹುದುಲಿನಲ್ಲಿ ಸಿಕ್ಕಿ ಹಾಕಿಕೊಂಡಾಗ ಉಂಟಾಗುವ ದುರಿತ ಲೋಕಮೂಢದ ಕಥೆಯಾಗಿ ಈ ಕಾದಂಬರಿ ರೂಪುಗೊಂಡಿದೆ. ಲೇಖಕರ ಅರ್ಥಶಕ್ತಿ ಕಾದಂಬರಿಯ ಉದ್ದಕ್ಕೂ ಸಾಥ್ ನೀಡಿದೆ. ಬದುಕು ಕಥೆಯಾಗುತ್ತ ಕಥೆ ಬದುಕಿನೊಂದಿಗೆ ತಳುಕು ಹಾಕಿಕೊಳ್ಳುತ್ತ ಬಂದು ಅನೂಹ್ಯ ಗ್ರಾಮ ಇತಿಹಾಸ ಇಲ್ಲಿ ಬಿಚ್ಚಿಕೊಳ್ಳುತ್ತದೆ. ಈ ಕಾದಂಬರಿಗೆ ಮೂರು ಆಯಾಮಗಳಿವೆ. ಸ್ವಾತಂತ್ರ್ಯಪೂರ್ವದ ಕಥನ, ಸ್ವಾತಂತ್ರ್ಯಾನಂತರದ ಕಥನ ಮತ್ತು ವರ್ತಮಾನದ ಕಥನ. ಗಾಂಧೀ ಇದ್ದಾಗ ಭಾರತ ನೆಮ್ಮದಿಯಾಗಿತ್ತು ಎಂದು ಕಾದಂಬರಿ ಸೂಚ್ಯವಾಗಿ ಹೇಳುತ್ತದೆ. ಸ್ವಾತಂತ್ರ್ಯ ಸಿಕ್ಕ ಮೇಲೆ ಪರಸ್ಪರ ಅನುಮಾನಗಳು, ಹುನ್ನಾರಗಳು, ಈರ್ಷೆಗಳು, ವ್ಯಭಿಚಾರಗಳು ಮತ್ತು ಖನಿಗಳು ನಿಧಾನವಾಗಿ ಜನರ ಜೀವನ ವಿಧಾನವಾಗುತ್ತಿರುವ ಬದಲಾವಣೆಗಳನ್ನು ಕಾದಂಬರಿ ನಿರುದ್ವಿಗ್ನವಾಗಿ ಕಥನ ಮಾಡುತ್ತದೆ. ಸಾತ್ವಿಕತೆ ಮತ್ತು ಸೌಹಾರ್ದತೆಗಳು ಈಗ ಬೇಕು ಎಂದು ಹಂಬಲಿಸುವ ಪಾಂಡುರಂಗರಾಯರು ಊರಲ್ಲಿಯ ಭಾವೈಕ್ಯತೆಗಾಗಿ ಜೈನ ಧರ್ಮದ ‘ಕ್ಷಮಾವಳಿ’ಗೆ ಮನಸೋಲುವುದು ಕಾದಂಬರಿ ಹುಡುಕುವ ಪರ್ಯಾಯ ಬದುಕಿನ ಉಪಾದಿಯಂತೆ ಕಾಣಿಸುತ್ತದೆ.
ಎಲ್ಲರನ್ನು ಕೂಡಿಸುವ ಜಾತ್ರೆ ಮೂರು ಊರುಗಳಲ್ಲಿಯ ಸೌಹಾರ್ದತೆಯನ್ನ ಹಾಳು ಮಾಡುವುದು ಬದುಕಿನ ವ್ಯಂಗ್ಯವಾಗಿದೆ. ಆದರೆ ಹಳಮಂಡಿ ಗುನ್ಯಾ ತಾನು ಮಾಡಿದ ಖನಿಯನ್ನು ಒಪ್ಪಿಕೊಳ್ಳುವ, ಗುಂಡಾಗಿರಿ ಮಾಡುತ್ತ ತಿರುಗುವ ಚಿಕ್ಕ ಕೊನೆಗೆ ಎಲ್ಲವನ್ನೂ ಬಿಟ್ಟು ಪರಿಶುದ್ಧವಾಗುವುದು ಕಾದಂಬರಿಯ ಆಶಯವಾಗಿದೆ. ಕಾದಂಬರಿಯ ಭಾಷೆ ಧಾರವಾಡ ಸೀಮೆಯ ಮಲೆನಾಡ ಸೆರಗಿನ ಗ್ರಾಮ ಬನಿಯನ್ನು ಧಾರಣ ಮಾಡಿ ಬಂದಿರುವುದು ಓದನ್ನು ಅಪ್ಯಾಯಮಾನಗೊಳಿಸಿದೆ.
-ಡಾ. ಬಾಳಾಸಾಹೇಬ ಲೋಕಾಪುರ




Reviews
There are no reviews yet.