SKU: 18726

ಬಾಂಬೆ ತೆಂಗು

100.00

Book Details
Author : ರವೀಶ್ ಬೀರೂರು
Publisher : ಪ್ರತಿಧ್ವನಿ ಪ್ರಕಾಶನ
Pages : 78

Quantity
🚚

All India Shipping

Timely Arrival:
5–10 Days
To Your Doorstep

Razorpay Secure Payments

Secure Payments

UPI • Cards • Net Banking
100% Safe & Secure

📦

Free Shipping

On Orders Above
₹999

share This book

Book Description

ಸ್ವಾಮಿನಾಥ ಮತ್ತು ರಾಧಮ್ಮ ದಂಪತಿಗಳ ಪುತ್ರನಾಗಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಜನಿಸಿದ ರವೀಶ್‌ ರವರು ಎಂ.ಎ. ಎಂ.ಇಡಿ, ಕೆಸೆಟ್, ವರೆಗೂ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸುಮಾರು 22 ವರ್ಷಗಳಿಂದ ವೃತ್ತಿ ಜೀವನವನ್ನು ಮಾಡುತ್ತಿದ್ದಾರೆ. ವೃತ್ತಿ ಬದುಕಿನೊಂದಿಗೆ ‘ಸುಮಾರು 20 ವರುಷಗಳಿಂದ ತನ್ನೊಳಗೆ ತಲ್ಲಣಿಸುವ ಭಾವನೆಗಳಿಗೆ ಅಕ್ಷರರೂಪವನ್ನು ನೀಡುತ್ತ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಕಥೆ, ಕವನ, ಚಟುಕು, ಲೇಖನ ಹೀಗೆ ವಿಭಿನ್ನ ಪ್ರಕಾರದ ಸಾಹಿತ್ಯ ರಚನೆಯನ್ನು ಹವ್ಯಾಸವಾಗಿರಿಸಿಕೊಂಡು ನಿರಂತರವಾಗಿ ಸ್ವ ಅನುಭವ, ಬದುಕು, ಸಮಾಜ, ಪ್ರಕೃತಿ ಮತ್ತು ನಮ್ಮ ನಡುವಿನ ವಿವಿಧ ವಿಷಯಗಳನ್ನು ಗ್ರಹಿಸುತ್ತ ಅವುಗಳೊಂದಿಗೆ ತನ್ನ ಭಾವನೆಗಳ ಮೂಲಕ ಮಾತನಾಡುವ, ಪ್ರಶ್ನಿಸುವ, ಉತ್ತರಿಸುವ ಕಾರ್ಯವನ್ನು “ಬಾಂಬೆ ತೆಂಗು” ಎಂಬ ಅವರ ಚೊಚ್ಚಲ ಕವನ ಸಂಕಲನದಲ್ಲಿ ಮಾಡಿದ್ದಾರೆ. ಕವಿ, ಸಾಹಿತಿ ಈ ಸಮಾಜದ ದನಿಯಾಗುವ ಗುಣವನ್ನೆ ಇವರು ಮುಂದುವರೆಸಿದ್ದಾರೆ. ಶೈಕ್ಷಣಿಕ ವೃತ್ತಿ ಬದುಕು ಮತ್ತು ಸಾಹಿತ್ಯಕ್ಕೆ ಭವ್ಯವಾದ ನಂಟು ಇತಿಹಾಸದಿಂದಲೂ ಇದೆ. ಶಿಕ್ಷಣ ಮಾಡುವ ಮೂಲಕ ಶಿಕ್ಷಕರಾಗಿ ಕವಿಯಾಗುವ ಮೂಲಕ ಮಾರ್ಗದರ್ಶಕನಾಗ ಹೊರಟಿರುವ ರವೀಶ್ ರವರಿಗೆ ಅಭಿನಂದನೆಗಳು ಮುಂದಿನ ದಿನಗಳಲ್ಲಿ ಇವರ ಸಾಹಿತ್ಯದಿಂದ ಉತ್ತಮವಾದ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತ ಸಾಹಿತ್ಯದ ಸಾರಸತ್ವ ಜಗತ್ತಿಗೆ ಸ್ವಾಗತ ಬಯಸುತ್ತೇನೆ. ಇವರ ಈ ಚೊಚ್ಚಲ ಕವನ ಸಂಕಲನಕ್ಕೆ ಶುಭವಾಗಲಿ.

ಪ್ರತಿಧ್ವನಿ ಪ್ರಕಾಶನ ಸಂಸ್ಥೆ ಚಿಕ್ಕಮಗಳೂರು ಇವರ ಪ್ರಕಾಶನ ಸಂಸ್ಥೆಯಿಂದ ಮೂಡಿಬರುತ್ತಿರುವ “ಬಾಂಬೆ ತೆಂಗು” ಚೊಚ್ಚಲ ಕವನ ಸಂಕಲನಕ್ಕೆ ಶುಭವಾಗಲಿ, ಸಾಹಿತ್ಯವು ನಿಂತ ನಿರಾಗಬಾರದು ಹರಿದು ಸಾಗರ ಸೇರುವ ಹೊಳೆಯಾಗಬೇಕು, ನಿರಂತರವಾಗಿ ಬರೆಯುವ ಮೂಲಕ ಈ ಆಶಯವನ್ನು ಈಡೇರಿಸುವಂತಾಗಲಿ.
ಎಂ ಎಸ್ ನಾಗರಾಜ್ ಮೂಡಿಗೆರೆ.
ಪ್ರಧಾನ ಸಂಚಾಲಕರು, ಪ್ರತಿಧ್ವನಿ ಪ್ರಕಾಶನ ಸಂಸ್ಥೆ ರಾಜ್ಯಾಧ್ಯಕ್ಷರು, ಕರ್ನಾಟಕ ಸಾಹಿತ್ಯ ಸಂಭ್ರಮ ರಾಜ್ಯ ಘಟಕ ಮೂಡಿಗೆರೆ.

Rating This Book

Reviews

There are no reviews yet.

Be the first to review “ಬಾಂಬೆ ತೆಂಗು”

Your email address will not be published. Required fields are marked *

Top Books