ಈ ಭರತ ಭೂಮಿಯಲ್ಲಿ ಹುಟ್ಟಿ…
ನಾನು ಕಾವಲುಗಾರನಾಗಬೇಕೆಂದಿದ್ದೇನೆ..
ಭಾರತಾಂಬೆಯ ನೆಲ ಜಲ ಅರಣ್ಯ
ಸಂಪತ್ತನ್ನು ಕಾಯಬೇಕೆಂದಿದ್ದೇನೆ…
ಈ ಭರತ ಭೂಮಿಯಲ್ಲಿ ಹುಟ್ಟಿ..
ನಾನು ಪಾಳ್ಯ ಗಾರನಾಗಬೇಕೆಂದಿದ್ದೇನೆ..
ಕಳ್ಳ ದಳ್ಳೂರಿಗಳ ಮೇಳ ಚದುರಿಸಿ ಸ್ಥಳೀಯರನ್ನು
ಉಳಿಸಬೇಕೆಂದಿದ್ದೇನೆ…
ಈ ಭರತ ಭೂಮಿಯಲ್ಲಿ ಹುಟ್ಟಿ..
ಅಜಾತಶತ್ರುವಿನಂತೆ ಬಾಳಬೇಕೆಂದಿದ್ದೇನೆ..
ಜಾತಿ ವಿಜಾತಿ ಯನ್ನದೇ ಎಲ್ಲರು ಒಂದೇ ಯಂಬ
ನೀತಿ ಸಾರಬೇಕು ಎಂದಿದ್ದೇನೆ…
ಭರತ ಭೂಮಿಯಲ್ಲಿ ಹುಟ್ಟಿ..
ಅಜ್ಞಾನದಿಂದ ಅರಿವಿನಡೆಗೆ ಸಾಗಬೇಕಿದೆ..
ವಿಜ್ಞಾನ ತಂತ್ರಜ್ಞಾನದ ಜ್ಞಾನ ಎಲ್ಲೆಲ್ಲೂ
ಮೊಳಗಿಸಬೇಕಿದೆ ಮೂಢನಂಬಿಕೆ ಓಡಿಸಬೇಕಿದೆ…
ಭರತ ಭೂಮಿಯಲ್ಲಿ ಹುಟ್ಟಿ..
ಒಗ್ಗಟ್ಟಿನ ವಡ್ಡೋಲಗ ತೆರೆಯಬೇಕಿದೆ..
ಸ್ನೇಹ ಪ್ರೀತಿ ವಿಶ್ವಾಸ ನಂಬಿಕೆ ಶಾಂತಿ
ಸಮಾಧಾನದ ಸಾರ ಎಲ್ಲೆಡೆ ಹಂಚಬೇಕಿದೆ…
ಈ ಭರತ ಭೂಮಿಯಲ್ಲಿ ಹುಟ್ಟಿ..
ಭೂತಾಯಿಯ ಋಣ ತೀರಿಸಬೇಕಾಗಿದೆ..
ರಕ್ತದ ಕಣಕಣವು ಈ ಪುಣ್ಯಭೂಮಿಗಾಗಿ
ಕಣ್ಣಲ್ಲಿ ಕಣ್ಣಿಟ್ಟು ಕಾಯಬೇಕಿದೆ…
ಜೈ ಬೋಲೋ ಭಾರತ್ ಮಾತಾ ಕಿ ಜೈ
ಶಿವಲೀಲಾ ಎಸ್ ಧನ್ನಾ
ಜಿ:-ಕಲ್ಬುರ್ಗಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ರನ್ನನ ಗದಾಯುದ್ಧ (Battle of Rannan)
ರನ್ನನ ಹೊಸಗನ್ನಡ ಗದಾಯುದ್ಧ
- Original price was: ₹150.00.₹140.00Current price is: ₹140.00.
-