You are currently viewing ಬೆಂಗಳೂರಿನ ಮೂಲಶಿಲ್ಪಿ

ಬೆಂಗಳೂರಿನ ಮೂಲಶಿಲ್ಪಿ

ಯಲಹಂಕದ ದೊರೆಗಳಲ್ಲಿ ಅತ್ಯಂತ ಪ್ರಮುಖರಿವರು
ನಾಡಪ್ರಭು ಕೆಂಪೇಗೌಡರೆಂಬ ನಾಮಧೇಯದವರು
ಕೆಂಪನಂಜೇಗೌಡ ಲಿಂಗಮ್ಮನವರ ಪ್ರಿಯ ಕುವರರು
ಒಕ್ಕಲಿಗ ಗೌಡ ವಂಶಸ್ಥರು ಯಶಸ್ವಿ ಆಡಳಿತಗಾರರು

ಕೆಚ್ಚೆದೆಯಿಂದ ಹೋರಾಡುವ ವೀರಾಧಿ ವೀರರು
ಕಲೆ ಮತ್ತು ಕಲಿಕೆಯ ಪ್ರೋತ್ಸಾಹಿಸುವ ಪೋಷಕರು
ಕನ್ನಡ ಮಾತಾನಾಡುವ ಸಮುದಾಯಕ್ಕೆ ಸೇರಿದವರು
ವಿದ್ಯಾವಂತ ಬುದ್ಧಿವಂತರು ದೂರದೃಷ್ಟಿಯುಳ್ಳವರು

ನೂರಾರು ಕೆರೆಗಳು, ಕಲ್ಯಾಣಿಗಳನ್ನು ನಿರ್ಮಿಸಿದವರು
ಸುಭದ್ರವಾದ ಕೋಟೆ ಕೊತ್ತಲುಗಳನ್ನು ಕಟ್ಟಿಸಿದವರು
ಎಂಟುದ್ವಾರಗಳಿರುವ ಕೆಂಪು ಕೋಟೆಯ ನಿರ್ಮಾತರು
ಬೆಂಗಳೂರು ನಗರಕ್ಕೆ ಭದ್ರ ಅಡಿಪಾಯ ಹಾಕಿದವರು

ವ್ಯಾಪಾರಕ್ಕಾಗಿ ಐವತ್ತ್ನಾಲ್ಕು ಪೇಟೆಗಳ ಮಾಡಿದವರು
ದೊಡ್ಡ ಮತ್ತು ಚಿಕ್ಕಪೇಟೆ ಬೀದಿಗಳಿಗೆ ಹೆಸರನ್ನಿಟ್ಟವರು
ಬಹುಭಾಷಾ ಶಾಸ್ತ್ರಜ್ಞರು ನಾಟಕಗಳ ರಚನೆಕಾರರು
ಬೆಂಗಳೂರಿನ ಶಿಲ್ಪಿ ಎಂದು ಇಂದಿಗೂ ಜನಜನಿತರು

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದವರು
ನಲ್ವತ್ತಾರು ವರ್ಷಗಳ ಕಾಲ ಆಳ್ವಿಕೆಯ ನಡೆಸಿದವರು
ದೈವಭಕ್ತರು ಹಲವಾರು ದೇವಾಲಯಗಳನಿರ್ಮಾತರು
ಬೆಂಗಳೂರಿನ ಮೂಲಶಿಲ್ಪಿ ನಾಡಪ್ರಭು ಕೆಂಪೇಗೌಡರು

ಕಾವ್ಯ ನಾಮ-ಬಸುಮಲ್ಕಿ
ಪೂರ್ಣಿಮಾ ರಾಜೇಶ್
ಹವ್ಯಾಸಿ ಬರಹಗಾರ್ತಿ ಕವಯಿತ್ರಿ
ಬೆಂಗಳೂರು








Leave a Reply