You are currently viewing ಬಾಪು

ಬಾಪು

ಮನುಕುಲಕೆ ಬೆಳಕು ಹರಸಿದ
ಮಹಾಮಾನತವಾದಿ
ಶಾಂತಿದೂತ ಮಹಾತ್ಮನೆ
ಮತ್ತೆ ಹುಟ್ಟಿ ಬನ್ನಿ ಈ ಧರೆಗೆ!!

ಧರ್ಮ ಧರ್ಮಗಳ ನಡುವೆ
ವಿಷಬೀಜ ಬಿತ್ತುವ ಮೂಢರ ಮತಿಗೆ
ರಘುಪತಿ ರಾಘವ ಭಜನೆಯ ಮೂಲಕ
ಸಾಮರಸ್ಯ ಸ್ಥಾಪಿಸಲು
ಮತ್ತೆ ಹುಟ್ಟಿ ಬನ್ನಿ ಈ ಧರೆಗೆ!!

ಎಲ್ಲೆಲ್ಲೂ ದಮನವಾಗುತ್ತಿರುವ ಸತ್ಯ
ಸತ್ತು ಗೋರಿ ಸೇರುವ ಮುನ್ನ
ಸತ್ಯಾನ್ವೇಷಣೆಯ ದರುಶನ ತೋರಲು
ಮತ್ತೆ ಹುಟ್ಟಿ ಬನ್ನಿ ಈ ಧರೆಗೆ!!

ದ್ವೇಷ ಅಸೂಯೆ ಹಿಂಸಾಚಾರವನ್ನು ವೈಭವೀಕರಿಸುತ್ತಿರುವ
ಕಾಲದಲ್ಲಿ ನಾವಿದ್ದೇವೆ,ವಿಚಾರವಾದಿಗಳ
ಹತ್ಯೆಯನ್ನು ಸಂಭ್ರಮಿಸುವವರಿಗಾಗಿ
ಶಾಂತಿಯ ಮಂತ್ರ ಸಾರಲು
ಮತ್ತೆ ಹುಟ್ಟಿ ಬನ್ನಿ ಈ ಧರೆಗೆ!!

ಬರಿ ಬಂದೂಕು ತುಪಾಕಿಗಳೇ
ಮಾತನಾಡುತ್ತಿರುವ ವರ್ತಮಾನದಲ್ಲಿ
ನಿಮ್ಮ ಕೋಲಿನ ಮುಂದೆ ಆಂಗ್ಲರ
ಲಾಠಿ ಕೋವಿಗಳೆಲ್ಲ ಸೋತು ಶರಣಾದ
ಕಥೆಗಳನ್ನು ಹೇಳಲಾದರೂ
ಮತ್ತೊಮ್ಮೆ ಹುಟ್ಟಿ ಬನ್ನಿ ಈ ಧರೆಗೆ!
ಮತ್ತೊಮ್ಮೆ ಹುಟ್ಟಿ ಬನ್ನಿ ಈ ಧರೆಗೆ!!

ಮಲ್ಲಿಕಾರ್ಜುನ ಅರಬಿ
೭೨೦೪೨೨೨೬೦೮
ಗುಳೇದಗುಡ್ಡ/ಮುಧೋಳ