You are currently viewing ಅವ್ವನ ಖಾತೆ

ಅವ್ವನ ಖಾತೆ

ಯಾವ ಬ್ಯಾಂಕ್ ನಲ್ಲಿಯೂ
ಅವ್ವನ ಹೆಸರಿನಲ್ಲಿ ಖಾತೆಯ ಪುಸ್ತಕವು ಇರಲಿಲ್ಲ
ಅಡುಗೆಮನೆಯಲ್ಲಿ ಇತ್ತು ಸಾಸಿವೆ ಜೀರಿಗೆ
ಚಹಾ ಪುಡಿಯ ಡಬ್ಬಿಯಲ್ಲಿ ನಿತ್ಯವೂ ಆ ಡಬ್ಬಿಯಲ್ಲಿ
ಒಂದೊ ಎರಡೋ ರೂಪಾಯಿ ಜಮೆಯಾಗುತ್ತಿತ್ತು

ನಮ್ಮೂರ ವಾರದ ಸಂತೆಯಲ್ಲಿ ತರಕಾರಿಯವರೊಂದಿಗೆ
ಚೌಕಾಸಿ ಮಾಡಿ ಉಳಿಸಿದ ಚಿಲ್ಲರೆ ಸಂಜೆ ಹೊತ್ತಿಗೆ
ಮತ್ತೆ ಹೊಲದ ಕೆಲಸಕ್ಕೆ ಹೋಗಿ ಉಳಿಸಿದ ಚಿಲ್ಲರೆ ಅಪ್ಪ
ಜಳಕಕ್ಕೆ ಹೋದಾಗ ತೆಗೆದುಕೊಂಡ ಅಂಗಿ ಕಿಸೆಯಲ್ಲಿನ ಚಿಲ್ಲರೆ
ಹೀಗೆ ಈ ಎಲ್ಲಾ ಮೂಲಗಳಿಂದ ಬಂದಿತ್ತು ಅವ್ವನ ಖಾತೆಯ ಉಳಿತಾಯದ ಜಮೆ

ತವರ ಮನೆಯ ಹಬ್ಬದಲ್ಲಿ ಅವರ ಅಣ್ಣ
ತಮ್ಮ ಸೀರೆಗೆಂದು ಕೊಟ್ಟ ಹಣ ಹರಿದ ಸೆರಗಿನಲ್ಲಿ
ಕಟ್ಟಿಇಟ್ಟಿದ್ದಾಳೆ ಚಿಮ್ಮಣಿ ಬೆಳಕಿನಲ್ಲಿ ಬಟ್ಟೆ
ಹೊಲದೂಕೊಟ್ಟು ಉಳಿಸಿಕೊಂಡಿದ್ದಾಳೆ
ದೇವರ ಹೆಸರಿನಲ್ಲಿ ಒಪ್ಪತ್ತು ಮಾಡಿ ಹಣ ಗಳಿಕೆ ಮಾಡಿಕೊಂಡಿದ್ದಾಳೆ

ಹಾಗಂತ ಅವ್ವ ಏನು ಸ್ವಾರ್ಥಿ ಅಲ್ಲ ಕೂಡಿಟ್ಟ
ಹಣ ಅವಳಿಗಂತೂ ಅಲ್ಲವೇ ಅಲ್ಲ ಕಷ್ಟಗಳು ಬಂದಾಗ
ಪರಿಹಾರಕ್ಕೆಂದು ಆಪತ್ತು ಕಾಲಕ್ಕೆ ಆಸೆರೆಯಾಗಲೆಂದು
ಹಣವನ್ನು ಉಳಿಸಿದ್ದಾಳೆ ಅವ್ವ ಕೂಡಿಟ್ಟ ಹಣದಿಂದ
ನಮಗೆ ಬಂದ ಎಲ್ಲಾ ಕಷ್ಟವೂ ದೂರವಾಗಿತ್ತು

ಚಂದ್ರಕಲಾ ಮ ಇಟಗಿಮಠ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ನಮ್ಮ ಇಂದಿನ ಸುಖಿ ಬದುಕು ಬುದ್ಧ ಬಾಬಾಸಾಹೇಬರು ನೀಡಿದ ಭಿಕ್ಷೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ