You are currently viewing ಆರ್. ಸಿ. ಬಿ. ವಿಜಯೋತ್ಸವ ಈ ಸಲ ಕಪ್ ನಮ್ದೇ

ಆರ್. ಸಿ. ಬಿ. ವಿಜಯೋತ್ಸವ ಈ ಸಲ ಕಪ್ ನಮ್ದೇ

ಹದಿನೆಂಟು ವರ್ಷಗಳ ಕನಸು ಇಂದು ನನಸಾಯ್ತಲ್ಲ
ಪಂಜಾಬ್ ತಂಡದ ವಿರುದ್ಧ ಜಯವ ಸಾಧಿಸಿದರಲ್ಲ
ಆರ್ ಸಿ.ಬಿ. ತಂಡ ರೋಚಕ ಗೆಲುವು ಸಾಧಿಸಿತಲ್ಲ
ಈ ದಿನ ಚೊಚ್ಚಲ ಕಪ್ ಮುಡಿಗೇರಿಸಿಕೊಂಡಿರಲ್ಲ

ದೇಶದಾದ್ಯಂತ ಸಂಭ್ರಮ ಸಡಗರ ಮನೆಮಾಡಿತಲ್ಲ
ಅಭಿಮಾನಿಗಳ ಜಯಘೋಷ ಮುಗಿಲು ಮುಟ್ಟಿತಲ್ಲ
ಗಲ್ಲಿ ಗಲ್ಲಿಯಲ್ಲೂ ಪಟಾಕಿ ಹಚ್ಚಿ ಸಂಭ್ರಮಸಿದರಲ್ಲ
ಪಡ್ಡೆ ಹುಡುಗರು ಹರುಷದಿ ಕುಣಿದು ಕುಪ್ಪಳಿಸಿದರಲ್ಲ

ಕೋಟ್ಯಂತರ ಜನರು ದೇವರಿಗೆ ಹರಕೆಯ ಹೊತ್ತರಲ್ಲ
ವಿಶೇಷ ಪೂಜೆ ಪುನಸ್ಕಾರ ಅಭಿಷೇಕ ಮಾಡಿಸಿದರಲ್ಲ
ಅಭಿಮಾನಿಗಳ ಹರಕೆಗೆ ತಕ್ಕ ಪ್ರತಿಫಲವಿಂದು ಸಿಕ್ಕಿತಲ್ಲ
ಈ ಸಲ ಕಪ್ ನಮ್ದೇ ನಮ್ದೇ ಎಂದು ಗೆದ್ದು ಬೀಗಿದಿರಲ್ಲ

ವಿರಾಟ್ ಕೊಹ್ಲಿ, ಎಬಿಡಿ, ಮತ್ತು ,ಗೇಲ್ ಆಟಗಾರರು
ತ್ರಿಮೂರ್ತಿಗಳು ಗೆದ್ದು ವಿಜಯೋತ್ಸವ ಆಚರಿಸಿದರು.
ಮರೆಯಲಾಗದ ಐತಿಹಾಸಿಕದ ಗೆಲುವಿನ ಕ್ಷಣ
ಆರ್.ಸಿ ಬಿ ತಂಡಕ್ಕೆ ಅಭಿನಂದನೆಗಳ ತಿಳಿಸೋಣ

ಪೂರ್ಣಿಮಾ ರಾಜೇಶ್
ಕಾವ್ಯ ನಾಮ-ಬಸು-ಶಲ್ಕಿ
ಬೆಂಗಳೂರು








Leave a Reply