You are currently viewing ಅಪ್ಪು ನೀ ಅಮರ

ಅಪ್ಪು ನೀ ಅಮರ

ಅಪ್ಪು ನೀ ಅಮರ
ನಾ ಬರೆಯುವೆ ಕನ್ನಡ ಅಕ್ಷರಗಳ ಹಾರ
ನೀ ಕರುನಾಡ ಕುವರ ನೀ ನಗುಮೊಗದ ವೀರ….

ಮುಗಿಲಲಿ ಮಿನಗುವ ದ್ರುವ ತಾರೆಯಾದೆ
ಬಡವರ ಬಾಳಿನ ಬೆಳಕಾದೆ ನವನೀತ
ನೀನಾದೆ ಪುಣ್ಯವಂತ ಪುನೀತ ನೀನು.

ಕೈ ಬೀಸಿ ಕರೆಯುತ್ತಿದೆ ಅಭಿಮಾನಿ ಬಳಗ ಇಷ್ಟೊಂದು
ಅವಸರ ವೇನುತ್ತು ಆಕಾಶಕೆ ಜಾರುವ ಆತರ
ಮತ್ತೆ ಮತ್ತೆ ಅಭಿಮಾನಿಗಳಿಗೆ ನಿನ್ನನ್ನು ನೋಡುವ ಕಾತರ

ಮೂರು ವರ್ಷವಾದರೂ ಯಾರು ಮರೆಯಲಾಗದ
ಪ್ರತೀಕ ನೀನು ಮಾಡಿದ ಕೆಲಸದೊಂದಿಗೆ
ನಿನ್ಯಾವತ್ತೂ ಜೀವಂತ ಜೀವಂತ ….

ಅಲ್ಪ ಆಯುಷ್ಯದಲ್ಲಿ ಕಲ್ಪತರು ನೀನಾದೆ
ಮಾನವರ ಮನ ಮುಟ್ಟಿದ ಭೂಮಿಗೆ ಬಂದ
ಬೆಟ್ಟದ ಹೂ ನೀನಾದೆ…

ಆನೆ ಇದ್ದರೂ ಸಾವಿರ ಸತ್ತರೂ ಸಾವಿರವೆನ್ನುವಂತೆ
ಅಪ್ಪು ಇದ್ದರೂ ಅನವರತ ಸತ್ತರೂ ಅನವರತ….

ನಿನ್ನ ಪುಣ್ಯ ಸ್ಮರಣೆಯ ಈ ದಿನ ಶೋಕ ದಿನವೋ
ಅಭಿಮಾನದ ಸುರಿಮಳೆಯೇಚಿರಾಯು ನೀ
ಅಪ್ಪು ಚಿರಾಯುಅಪ್ಪು ನೀ ಅಮರ.

ಚಂದ್ರಕಲಾ ಇಟಗಿಮಠ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ