You are currently viewing ಜಗಜ್ಯೋತಿ ಬಸವೇಶ್ವರರು

ಜಗಜ್ಯೋತಿ ಬಸವೇಶ್ವರರು

ದಿವ್ಯ ನುಡಿಗಳ ಅಮೃತ ಕುಡಿದು
ಲೋಕದ ಕಲ್ಯಾಣಾದಿ ರಾಜ್ಯ ತೊರೆದು
ಬೀದಿ ಬೀದಿಗಳಲ್ಲಿ ತತ್ವಸಿದ್ದಾಂತ ಬರೆದು
ಸಮಾನ ಎಂಬ ಸಾರ ಹೊತ್ತು ಮಡಿದು
ಎಲ್ಲರಲ್ಲಿಯೂ ಬೆರೆಯುವ ಬಸವೇಶ

ಅನುಭವಗಳಲ್ಲಿ ಅರಿವು ಕಂಡು
ಸಾಮನ್ಯರಲ್ಲಿ ಶಿವನನ್ನು ಕಂಡು
ಭಕ್ತಿಯೆಂಬ ಜ್ಯೋತಿ ಕಂಡು
ಮುಕ್ತಿಯು ಪಥ ಗುರಿನಲ್ಲಿ ಕಂಡು
ಜಗಕೆ ‘ ಒಂದೆ ‘ ಎಲ್ಲರಿಗೂ ಬಸವೇಶ

ಜಾತಿ ಜಾತಿಗಳ ಮಧ್ಯೆ ಪ್ರೀತಿ ಬೆಳಸಿ
ಮೇಲ್ ಕೇಳ್ ರಲ್ಲಿ ಸಮಾನತೆ ಅರಿಳಿಸಿ..
ನೀಚರಲ್ಲಿ ಶಾಂತಿಯ ಮಾರ್ಗ ತೋರಿಸಿ..
ಬಂದವರೆನೆಲ್ಲಾ ಬಂಧು ಎಂದು ಭಾವಿಸಿ
ಶೂದ್ರರಿಗೆ ಶರಣೆಂದರು ಬಸವೇಶ

ಅನುಭವ ಮಂಟಪದ ರೂವಾರಿಗಳು
ಬಸವರ ಆದರ್ಶ ಮಾರ್ಗಗಳು
ಜಗಕೆಲ್ಲಾ ಜ್ಯೋತಿಯಾದ ತತ್ವಗಳು
ಕೂಡಲ ಸಂಗಮೇಶರಾದ ಬಸವೇಶ

ಸತ್ಯ ,ನ್ಯಾಯ ,ಭಕ್ತಿ ,ಮುಕ್ತಿ
ನೀತಿ , ವಿವೇಕ, ಅರ್ಥಶಾಸ್ತ್ರ
ನೀತಿಗಳ ಭಂಡಾರ ಜಗಜ್ಯೋತಿ
ಸಜ್ಜನರ ಸಂಘ ಸದಾ ಒಳಿತು
ಮೂಢನಂಬಿಕೆ ವಿರೋಧಿ ಬಸವೇಶ

ಮಾದರಸ ಮಾದಲಾಂಬಿಕೆಯ ವರಪುತ್ರರು
ಜ್ಞಾನವನ್ನ ಮನದಲ್ಲಿ ಧರಿಸಿದ ಪೂಜ್ಯರು
ಕಲಚೂರಿಯಿಂದ ಕೂಡಲ ಸಂಗನ ನೆನೆದರು
ಕಾರ್ಯದಲ್ಲಿ ಕೈಲಾಸಂ ಕಾಣುವರು ಜಗದೊಡೆಯ ಬಸವೇಶ ಬಸವೇಶ..

ಒಂದೊಂದು ವಚನ ಅಮೃತ ವಾಹನ
ನೀತಿಗಳ ಸಂವಹನ ಸಹೃದಯ ಚಿಂತನ
ದುಷ್ಟರಿಗೆ ಅರಿವು ಮೂಡಿಸುವ ಮಾರ್ಗವ
ದಯೆವಿದ್ದಲ್ಲಿ ಧರ್ಮದ ಮೌಲ್ಯ ನೋಡುವ ಜಗಜ್ಯೋತಿ ಬಸವೇಶ … ಬಸವೇಶ

ಎಲ್ಲರಿಗೂ ಶ್ರೀ ಬಸವೇಶ್ವರ ಜಯಂತಿಯ ಶುಭಾಶಯಗಳು

ರಾಜಾಭಕ್ಷು ಮಣ್ಣೂರ
ಸಾ.ಹಿರೇಮುಗದೂರ
ತಾ.ಸವಣೂರು ಜಿ.ಹಾವೇರಿ
೯೬೧೧೬೨೬೨೭೭


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.