You are currently viewing ಭಾಮಿನೀ

ಭಾಮಿನೀ

ಭಾಮಿನೀ ಇವಳು ಭುವನ ಮನೋಹರಿ
ಭುವಿಯಂತೆ ಭಾರಹೊತ್ತ ತಾಳ್ಮೆಯ ಒಡತಿ

ಜಗದ ಸೃಷ್ಟಿಯ ಸೌಂದರ್ಯದ ಖನಿ ಇವಳು
ಸೃಷ್ಟಿಯನೆ ಒಡಲಲಿ ಹೊರುವ ಜನನಿ ಇವಳು

ಹುಟ್ಟಿದ ಮನೆಯಲಿ ನಗುತಂದ ಹೆಣ್ಣಿವಳು
ಮೆಟ್ಟಿದ ಮನೆತನದ ಸೂಕ್ಷ್ಮತೆಯ ಕಣ್ಣಿವಳು

ಪ್ರೀತಿ ಮಮತೆಯ ಬತ್ತದ ಸೆಲೆ ಹೃದಯದಲಿ
ಅಂತಃಕರಣದ ಒರತೆ ಚಿಮ್ಮುವುದು ಗುಣದಲಿ

ನೀಲಾಂಬರದಷ್ಟು ಸಹನೆಯ ಆಗರ ಒಡಲಲಿ
ಮೀರಿದರೆ ಸಹನೆ ಜ್ವಾಲಾಮುಖಿಯು ಮುಖದಲಿ

ಕಷ್ಟ ಸುಖಗಳ ಇಂಗಿತವನರಿತ ಮನೆಯ ಇಂದಿರೆ ಇವಳು
ಕ್ಷಣದಲಿ ಸಮಸ್ಯೆಗಳ ನಿಭಾಯಿಸುವ ಸೂಕ್ಷ್ಮ ಮತಿಯವಳು

ಕಾಡಿಸಿ, ನೋಯಿಸಿ, ಅವಮಾನಿಸದಿರಿ ಅವಳ ಮನವನೆಂದಿಗೂ
ಎದೆಗುಂದದಿದ್ದರೂ ಎದಕು ಸೂಕ್ಷ್ಮ ಮನದವಳು ನಿಜಕೂ

ವೈಷ್ಣವಿ ಹುಲಗಿ
ಕೊಪ್ಪಳ.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.