ವಸಂತ ಋತುವಿನ
ಆದರದಿ ಆಗಮನ
ಧಗಧಗಿಸುವ ಬಿಸಿಲು
ಮನ ನೊಯಿಸುವ ಕಸುವು.
ಅವರು ಇವರು ಎನ್ನದೆ
ಸೂರ್ಯನ ಶಾಖವು ತಾಳದೆ
ತoಪು ಗಾಳಿ-ನೆರಳಿಗಾಗಿ
ಮನ ತಡಕಾಡಿ ಹುಡುಕುವದು.
ತರಗೆಲೆಗಳು ಕಳಚಿದಾಗ
ಮಾಮರಗಳ ಹೊಸ ಚಿಗುರು
ಹಸಿರು ಹೊದಿಕೆಯ ಮರ
ಎಳೆ ಚಿಗುರಿನ ಅಚ್ಚರಿ.
ಎತ್ತರೆತ್ತರಕೆ ಬೆಳೆದು
ಆಕಾಶಕ್ಕೆ ಮುತ್ತಿಡಲು
ಹೊರಟಿರುವ ಮರಕ್ಕೆ
ಹೊಸ ಚಿಗುರಿನೊoದಿಗೆ
ಮುನ್ನುಗ್ಗುವದು ಒoದೆ ಆಶೆ
ವಸಂತ ಋತುವಿನ
ಆಗಮನದಿ ಕಾಯುವ
ಕೋಗಿಲೆಯ ಚಿಗುರೆಲೆಯ
ಮರೆಯಲ್ಲಿ ಕುಹೂ. ಕುಹೂ.
ಸಂಜಯ ಜಿ ಕುರಣೆ
ಶಿಕ್ಷಕರು, ಐನಾಪೂರ
ತಾಲೂಕು. ಕಾಗವಾಡ
ಜಿಲ್ಲಾ. ಬೆಳಗಾವಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.