You are currently viewing ಹೊಸ ಮನ್ವಂತರ ದತ್ತ

ಹೊಸ ಮನ್ವಂತರ ದತ್ತ

ಹಕ್ಕಿಗಳ ಚಿಲಿಪಿಲಿ ಕಲರವ
ಮೇಳೈಸಿದೆ ಪ್ರಕೃತಿಯಲ್ಲಿ ಹೊಸತನವ
ಸಿಹಿ ಕಹಿಯ ಅನುಭವ
ಹೊತ್ತು ತಂದಿದೆ ಯುಗಾದಿ ವೈಭವ

ನವಯುಗದತ್ತ ಮನಸ್ಸ ಹೊರಳಿಸಿ
ಕಷ್ಟ ಸುಖವ ಸಮಾನ ಭಾವದಲಿ ಸ್ವೀಕರಿಸಿ
ಸ್ವಾರ್ಥ ದ್ವೇಷ ಅಸೂಯೆ ಅಳಿಸಿ
ಸದ್ವಿಚಾರದಿ ಹೊಸ ವರುಷಕೆ ಮುನ್ನುಡಿ ಬರೆಸಿ

ಕಂಗೊಳಿಸಲಿ ಶುಭ್ರತೆಯಲಿ ವಾತಾವರಣ
ಮನೆ-ಮನಗಳಲಿ ಮಿಂಚಲಿ ತಳಿರು ತೋರಣ
ಘಮ್ಮೆಂದು ಬರಲಿ ಹೋಳಿಗೆಯ ಹೂರಣ
ಮುಂದೆ ಸಾಗುತಿರಲಿ ಸಂತಸದ ಪಯಣ

ಶುಭ ಕೃತ್ ನಿಂದ ಶೋಭಕೃತ್ ದತ್ತ ನಡಿಗೆ
ಬಾಳಲ್ಲಿ ಮೂಡಲ್ಲಿ ಪ್ರೀತಿಯ ಬೆಸುಗೆ
ಒಲವು ಗೆಲುವಿನ ಯಾನ
ತುಂಬಿರಲಿ ಸಿಹಿ ಕಹಿ ಸಮರಸದ ಜೀವನ

ಹೊಸತು ವರುಷ
ತರಲಿ ಬಾಳಲ್ಲಿ ಹರುಷ
ಯುಗಾದಿಯ ಹಾರ್ದಿಕ ಶುಭಾಶಯ
ಸವಿಯೋಣ ಬೇವು ಬೆಲ್ಲದ ಸವಿಯ

ಉಷಾ ಪ್ರಶಾಂತ್
ಸಿದ್ದಾಪುರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.