You are currently viewing ಯುಗಾದಿ ಹಬ್ಬ

ಯುಗಾದಿ ಹಬ್ಬ

ಯುಗಾದಿ ಬಂತಲ್ಲ
ಬೇವು ಬೆಲ್ಲದ ರುಚಿ ತಂತಲ್ಲ
ಹೊಸ ವರುಷ ಎಂದು ಹೇಳುತ್ತೇವೆಯಲ್ಲ

ಹೊಸ ಚಿಗುರುನೊಳಗೆ ಹೊಸ ಮನಸ್ಸಿನೊಳಗೆ
ಹೊಸ ಜೀವನವನ್ನು ಹೊಸೆಯೋಣ
ಅದಕ್ಕೆ ಯುಗಾದಿ ಹಬ್ಬಹೊಸ
ವರುಷ ಆಚರಿಸುವಂತಾಗಲಿ

ಯುಗ ಯುಗಾದಿ ಕಳೆದು
ಹಳೆಯದನ್ನು ಅಳೆದು
ಹೊಸತನದ ತಳಹದಿ
ರಂಜಿಸುವ ಯುಗ ಯುಗಾದಿ
ಹಬ್ಬ ಅಬ್ಬಬ್ಬಾ ಎನ್ನುವಂತಾಗಲಿ

ಸುಖ ಶಾಂತಿ ನೆಮ್ಮದಿಯಿರಲಿ
ನವ ಚೈತನ್ಯ ಬಾಳಲಿ ತುಂಬಲಿ
ಯುಗಾದಿ ಬೆಳಕು ನಮ್ಮನ್ನ ಬೆಳಗಿಸಲಿ
ಹೊಸತು ಹೊಸತು ಆರಂಭವಾಗಲಿ.

ಈ ಜೀವನ ಬೇವು ಬೆಲ್ಲ
ಬಲ್ಲವನಿಗೆ ವೇದನೆಯಿಲ್ಲ
ಬದುಕಿನ ಮೆಟ್ಟಿಲು ಸಾಧನೆಯಲ್ಲ
ಇರುವ ತನಕ ಸುಖವೆಯೆಲ್ಲ
ಇದುವೆ ಹೊಸ ಯುಗಾದಿ ಹೊಸ ವರುಷ ನಮಗೆಲ್ಲ.

ಶ್ರೀಕಾಂತಯ್ಯ ಮಠ
ಲಿಂಗಸೂಗುರು ರಾಯಚೂರು ಜಿಲ್ಲೆ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.