ಪ್ರೀತಿಗಾಗಿ ಪ್ರೇಮಲೋಕದ ಮನೆ ಕಟ್ಟಿರುವೆ ಜೊತೆಯಾಗು ನೀನು
ಒಂದೆ ಮನಸ್ಸು ಹಲವು ಕನಸು ಹೊತ್ತು ಬಂದೆ ಜೊತೆಯಾಗು ನೀನು.
ಮನದ ಬಯಕೆಯನ್ನು ಬಿತ್ತಿ ಬೆಳೆಸಿ ಕನಸುಗಳನ್ನು ನನಸಾಗಿಸು.
ನಮ್ಮ ಸಂಬಂಧದ ಸೌಂದರ್ಯವನ್ನು ಪಡೆದು ಜೊತೆಯಾಗು ನೀನು.
ಪ್ರೀತಿ ಒಲುಮೆಯ ಅನುಬಂಧದ ಕರೆಯನ್ನು ಸಮನಾಗಿ ಸ್ವೀಕರಿಸು.
ನೋವಿಲ್ಲದ ಬದುಕನ್ನು ಸಾರ್ಥಕಗೊಳಿಸಲು ಜೊತೆಯಾಗು ನೀನು.
ಮಧುರ ಬಾಂಧವ್ಯದಿಂದ ಬೇರೆಯಾಗದೆ ಸದಾಕಾಲ ಒಂದಾಗಿರು.
ಸಂಭ್ರಮದ ಸಂಧರ್ಭವಿದು ಬಂದೊಮ್ಮೆ ಜೊತೆಯಾಗು ನೀನು.
ನನ್ನೆದೆಯ ಬಯಲಿನಲ್ಲಿ ಕಾಮನಬಿಲ್ಲು ಮೂಡಿಸುವ ನಿರೀಕ್ಷೆ ನನ್ನದು
ಪ್ರೇಮಾಲಾಪದ ಕೂಗು ಕರೆಯುತ್ತಿದೆ ಬಂದೊಮ್ಮೆ ಜೊತೆಯಾಗು ನೀನು.
ಮನದಲ್ಲಿ ಸಾವಿರಾರು ಭಾವನೆಗಳ ಕವಿ ಸಾಹಿತ್ಯದ ಭವ್ಯ ಬರಹಗಳಿವೆ.
ಅನುಬಂಧದ ಅನುರಾಗ ಕೊಡುವ ಕಾಂತನಿಗೆ ಜೊತೆಯಾಗು ನೀನು.
ಶ್ರೀಕಾಂತಯ್ಯ ಮಠ
ಲಿಂಗಸೂಗುರು ರಾಯಚೂರು ಜಿಲ್ಲೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.