You are currently viewing ಸ್ಪಂದನೆ

ಸ್ಪಂದನೆ

ಪ್ರತಿಯೊಂದು ಜೀವಿಗೂ ಭಾವನೆ ಇರಲು
ಪ್ರತಿ ಸ್ಪಂದನೆ ಸಿಗಲು ಉಲ್ಲಾಸವಿರಲು
ಗಳಿಗೆಯು ಸವಿಮಾತಾಡುವ ಮನಸಿರಲು
ಸ್ವರ್ಗದ ಹೊನಲಿನಂತೆ ತುಂಬಿದ ಬಾಳಾಗಲು||

ಕಾರ್ಮೋಡ ಹೊತ್ತು ಸಾಗಲು ಅಂಬರವು
ಕರೆಯುತಿದೆ ಮಳೆಸುರಿಯಲು ಭುವಿಯು
ಹಸಿರಿನ ಕಾನನ ಮೈನೆವರೇಳಿಸಿ ನಿಂತಿರಲು
ಕೂಡಲೇ ವರ್ಣನು ಸುರಿಸಿ ಭೋರ್ಗರೆಯಲು||

ಮುಗ್ದಕಂದನ ನಗುವಿನ ಮುಖದ ಅಂದವು
ಕತ್ತಲೆ ಕಳೆದೋಗುವ ಮನದ ದುಗುಡವು
ನೋಡಿಯು ಸ್ಪಂದನೆ ಕೊಡದ ಮನಸ್ಸಿನವರು
ನಿಂತತಿಳಿ ನೀರಿಗೆ ಕಲ್ಲೇಸೆದು ನಗುವವವರು||

ಮೇಲುಕೀಳಿನ ಭಾವನೆ ಅಂತರಂಗದಿ ಇಟ್ಟುಕ್ಕೊಂಡು
ಮೇಲ್ನೋಟಕ್ಕೆ ಸದ್ಗುರುವಿನಂತೆ ನಟನೆ ಮಾಡಿಕೊಂಡು
ಮಾಡಿದ ಪಾಪವೆಲ್ಲ ಒಡಲಲ್ಲಿ ತುಂಬಿಕೊಂಡು
ತೀರ್ಥಕುಡಿದ ನಾವೆಲ್ಲಾ ಪುಣ್ಯವಂತರು ಅಂದುಕೊಂಡು ||

ಸವಿತಾ ಮುದ್ಗಲ್
ಗಂಗಾವತಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.