You are currently viewing ಬಂದೂಕು ಮೌನ (ಹಾಯ್ಕುಗಳು)

ಬಂದೂಕು ಮೌನ (ಹಾಯ್ಕುಗಳು)


ಅವಳ ಪ್ರೀತಿ
ಮಾಗಿ ಪರಿಪಕ್ವತೆ;
ಬದುಕು ನಾಕ.

ಹೂ ಹಿಚು,ಕಾಯಿ
ಕೂಡಿ ಮರ ಸೊಬಗು
ಬಾಯಿ; ಅಮೃತ.

ಕರುಣೆ ಇಲ್ಲ,
ಇನಿತು ಮನದಲ್ಲಿ.
ಬರೀ ಬಂಜರು

ಮನಸು ಹೂವು
ಮಾತು ಮುತ್ತಿನ ಹಾರ
ಜಗ ಕೈಲಾಸ !!

ಕಾಯಕವೇ ಕೈ
ಲಾಸ ; ಬೆವರಿನಲಿ
ಶ್ರಮ ಸಂಸ್ಕೃತಿ

ನಾಲಿಗೆಯಿಂದ
ಹೊರಬಂದ ಶಬ್ದಕ್ಕೆ
ಬಂದೂಕು ಮೌನ.!!

ಸಖಿಯೇ ನೀನು
ಭೂಮಿ ತೂಕದವಳು
ಕ್ಷಮೆ; ಧರಿತ್ರಿ.

ಯಾಕ ಅಳತಿ;
ಜೀವವೇ ;ಉಲ್ಲಾಸವೇ
ಜೀವ ಚೈತನ್ಯ.
೯,
ಮೈಕ್ ಕಂಡರೆ
ಮಾತನಾಡುವ ಹುಚ್ಚು
ನಗೆಪಾಟಲು !!
೧೦,
ಹುಡುಗಿ ಮಾಟ
ನೋಡಿದ ಹುಡುಗನು
ತನ್ನ ಮರೆತ.!!

ಗಂಗಾಧರ ಅವಟೇರ
ಇಟಗಿ/ಮಹಾಲಿಂಗಪುರ