ಬಿಸಿಲ ತಾಪಕೆ
ಪರಿತಪಿಸಲ್ಲಿಲ್ಲ
ಬಾಯಾರಿಕೆ ಎನಗೆಂದು
ಕನವರಿಸಲಿಲ್ಲ ಅಬ್ಭಾ..!
ಎಂತಹ ತಾಳ್ಮೆ ತಾಯಿ
ಮೈತುಂಬ ರಂದ್ರ
ಕೊರೆದರೂ ದ್ವೇಷ
ಕಾರದೆ ಜೀವಜಲ
ನೀಡಿ ಎಮ್ಮ ತೃಷೆ
ತಣಿಸಿದೆ ತಾಯಿ
ಗಾಳಿಗೆ ಸೆರಗ ಸರಿದು
ಮಳೆಗೆ ಒದ್ದೆಯಾದರೂ
ಶೀತ ಜ್ವರವೆಂದು
ಕೊರಗಲ್ಲಿಲ್ಲ ಎಲ್ಲ
ನೋವು ನುಂಗಿ ನಡೆದಿ
ತನ್ನ ಸಿರಿತನಕೆ
ನಿನ್ನೊಡಲ ಬಗೆದು
ಬಡತನ ತಂದರೂ
ಮರು ಮಾತಾಡದೆ
ಹೊತ್ತು ನಡೆದಿ
ಕ್ಷಮಯಾ ಧರಿತ್ರಿ
ಸಾಧ್ಯವಾದರೆ ಕ್ಷಮಿಸಿಬಿಡು
ನಿನ್ನ ಕರುಳು ಕುಡಿಯನ್ನ
ಹಾಗೆ ನಿನ್ನ ತಾಳ್ಮೆ ನನಗೂ
ಸ್ವಲ್ಪ ಕೊಟ್ಟು ಬಿಡು……!
ಎಸ್ ಎನ್ ಬಾರ್ಕಿ
ರಾಜ್ಯಶಾಸ್ತ್ರ ಉಪನ್ಯಾಸಕರು
ಆದರ್ಶ ಸಂಯುಕ್ತ ಪದವಿ ಪೂರ್ವ
ಕಾಲೇಜು ಬೇವೂರ
9538695030