ಗಝಲ್

ಕನ್ನಡ ರಾಜ್ಯೋತ್ಸವ ವಿಶೇಷ

ಜಯಶ್ರೀ ಭಂಡಾರಿ

ಸ್ವಾತಂತ್ರ್ಯ ಹೋರಾಟದ ಪ್ರಮುಖ ಪಾತ್ರಧಾರಿ ಏಕತೆಯು ಬಂದಿದೆ ನೋಡು

ಪಾರತಂತ್ರ್ಯಆರ್ಭಟ ನೀಗಿಸಿ ಸೂತ್ರಧಾರಿ ಏಕತಾನತೆ ಕುಂದಿದೆ ನೋಡು

ಹರಿದು ಹಂಚಿ ಹೋದ ಭಾಷಾವಾರು ಪ್ರಾಂತ್ಯಗಳ ವಿಲೀನಗೊಳಿಸಿದಿರಲ್ಲವೇ

ಕರೆದು ದೇಶದ ವಿವಿಧ ಭಾಗಗಳನ್ನು ಒಂದು ಗೂಡಿಸಿ ಒಕ್ಕೂಟ ಮಿಂದಿದೆ ನೋಡು.

ಗಾಂಧಿ,ನೆಹರು ಒಡನಾಡಿ ಸದಾ ಚಿಂತನೆಯಲಿ ನೊಂದ ರೂವಾರಿ

ಬಂಧನದಿ ಬೆಂದು ಹೋರಾಡಿ ಸಾದಾ ಜೀವನದಿ ನಿಂದು ಸಂದಿದೆ ನೋಡು

ಗುಲಾಮಗಿರಿಯ ವಿರುದ್ಧ ಕಠಿಣ ಕ್ರಮದಿ ಮಾತೃಭೂಮಿ ಪೊರೆದು ದಣಿದಿರಿ

ಮುಲಾಮು ಅರೆದು ದಾಸ್ಯದ ಬೀಜವ ಕಿತ್ತು ಎಸೆದು ಐಕ್ಯತೆ ತಂದಿದೆ ನೋಡು

ಮರೆತಿಲ್ಲ ಅನುಗಾಲದ ಸೇವಾ ಕೈಂಕರ್ಯ ಪುತ್ಥಳಿ ಇರಿಸಿ ಜಪಿಸುತಿಹರು ನಾಮವ.

ಅರಿತು ಅನುಭಾವ ನೇಮವ ಉಕ್ಕಿನ ಸುಪಥದಿ ಸುಕೃತ ನಿಂದಿದೆ ನೋಡು.

ವರುಷಗಳು ಉರುಳಿ ತೆರಳಿದರೂ ಅಜರಾಮರ ಭಾರತೀಯರ ಮನದಂಗಳದಿ

ವಿವಿಧತೆಯಲ್ಲಿ ಅರಳಿ ಹೊರಳಿ ಮಹಾವೃಕ್ಷದ ಬೇರಿನ ಆರತಿ ವಂದಿದೆ ನೋಡು

ನಿಷ್ಠುರ ನಿಗರ್ವಿ ಸರ್ದಾರ್ ಆಕಾಶದೆತ್ತರದಿ ಮಟ್ಟಸವಾಗಿ ಎದೆಗುಂದದಿರು ಕಲಿಸಿದೆ

ಅಷ್ಟೂರ ಕಬ್ಬಿಣ ಆರಿಸಿ ಪೇರಿಸಿ ಕನ್ನಡ ಜಯಭೇರಿ  ಮೌನವೇ ಎಂದಿದೆ ನೋಡು.

ಜಯಶ್ರೀ ಭಂಡಾರಿ

ಬಾದಾಮಿ. 

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.