You are currently viewing ಶಿಕ್ಷಕರು ರಾಷ್ಟ್ರದ ರಕ್ಷಕರು

ಶಿಕ್ಷಕರು ರಾಷ್ಟ್ರದ ರಕ್ಷಕರು

ತಮಿಳುನಾಡಿನ ತಿರುತ್ತಣಿ ಗ್ರಾಮದಲ್ಲಿ ಜನಿಸಿದವರು
ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮನವರು
ಸರ್ವಪಲ್ಲಿ ಮನೆತನದ ಹೆಸರಿನ ರಾಧಾಕೃಷ್ಣನ್ ರವರು
ಬಿಎ.ಮತ್ತು ಎಂ.ಎ ಸ್ನಾತಕೋತ್ತರ ಪದವೀಧರರು

ಶಿಕ್ಷಕರು ಮೇಧಾವಿಗಳು ತತ್ವಜ್ಞಾನದ ಉಪನ್ಯಾಸಕರು
ಶಿಕ್ಷಣ ತಜ್ಞರು ಬಹುಮುಖ ಪ್ರತಿಭೆಯ ವ್ಯಕ್ತಿತ್ವದವರು
ಆಳವಾದ ಅಧ್ಯಯನ ಹರಿತವಾದ ವಿಚಾರವಂತರು
ಭಾರತೀಯ ಸನಾತನ ಧರ್ಮದ ಹಿತಚಿಂತಕರಿವರು

ನಮ್ಮ ಭಾರತದ ರಾಷ್ಟ್ರಪತಿಯಾಗಿ ಸೇವೆಗೈದವರು
ನಮ್ಮ ದೇಶದ ಅಭಿವೃದ್ಧಿಗಾಗಿ ಅವಿರತ ಶ್ರಮಿಸಿದವರು
ತಮ್ಮ ಇಡೀ ಜೀವನ ದೇಶಕ್ಕಾಗಿ ಮುಡಿಪಾಗಿಟ್ಟವರು
ದೇಶಸೇವೆಯೇ ಈಶ ಸೇವೆಯೆಂದಂತ ಮಹಾತ್ಮರು

ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಗೆ ಭಾಜನರಾದವರು
ಹಲವಾರು ಅತ್ಯುನ್ನತ ಪುರಸ್ಕಾರ ಗೌರವ ಪಡೆದವರು
ಭಾರತೀಯರ ಮನದಿ ಅಚ್ಚಳಿಯದ ಛಾಪೊತ್ತಿದವರು
ಸಮರ್ಥ ಶಿಕ್ಷಕರು ರಾಷ್ಟ್ರದ ರಕ್ಷಕರು ರಾಧಾಕೃಷ್ಣನ್ ರವರು

🙏ಧನ್ಯವಾದ
ಪೂರ್ಣಿಮಾ ರಾಜೇಶ್
ಬೆಂಗಳೂರು









Leave a Reply