You are currently viewing ದೇಶದ ಸ್ವಾತಂತ್ರ್ಯದ ಹಣತೆ ಆರದಿರಲಿ

ದೇಶದ ಸ್ವಾತಂತ್ರ್ಯದ ಹಣತೆ ಆರದಿರಲಿ

ನಮ್ಮ ದೇಶ ಭಾರತ ನಾವು ಭಾರತೀಯರೆನ್ನುವ
ನಾವೆಲ್ಲರು ಭಾರತಾಂಬೆಯ ಮಡಿಲ ಮಕ್ಕಳೆನ್ನುವ
ನಾವೆಲ್ಲ ಭಾರತದ ಸತ್ಪ್ರಜೆಯೆಂದು ಹೆಮ್ಮೆಪಡುವ
ನಮ್ಮ ಭಾರತ ಸ್ವತಂತ್ರ ದೇಶವೆಂದು ಹರುಷಿಸುವ

ಜಾತಿ ಧರ್ಮ ರಾಜ್ಯ ಭಾಷೆಗಿಂತ ದೇಶ ದೊಡ್ಡದೆನ್ನುವ
ಜಾತಿ-ಮತ ಭೇಧ-ಭಾವ ದ್ವೇಷವನ್ನು ಮಾಡದಿರುವ
ದೇಶ ಸೇವೆಯೇ ಈಶ ಸೇವೆಯೆನ್ನುತ ದುಡಿಯುವ
ನಮ್ಮ ಮಾತೃಭೂಮಿಯ ರಕ್ಷಣೆಗಾಗಿ ಪಣತೊಡುವ

ನಮ್ಮ ದೇಶದ ಸೈನಿಕರ ನಮ್ಮ ರಕ್ಷಕರ ಗೌರವಿಸುವ
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಸ್ಮರಿಸುವ
ಭಾರತ ದೇಶ ಯೋಧರ ಭರತಭೂಮಿಯೆನ್ನುವ
ದೇಶದ ಗಡಿಯ ಕಾಯುವ ಯೋಧರಿಗೆ ನಮಿಸುವ

ಆಗಸ್ಟ್ ಹದಿನೈದರಂದು ಸ್ವಾತಂತ್ರ್ಯ ದಿನವ ಆಚರಿಸುವ
ಕೇಸರಿ ಬಿಳಿ ಹಸಿರು ಬಣ್ಣದ ತ್ರಿವರ್ಣ ಧ್ವಜ ಹಾರಿಸುವ
ದೇಶದ ಸ್ವಾತಂತ್ರ್ಯದ ಹಣತೆ ಎಂದೂ ಆರದಿರಲೆನ್ನುವ
ಒಕ್ಕೊರಲಿನಿಂದ ಜೈ ಹಿಂದ್ ವಂದೇ ಮಾತರಂ ಎನ್ನುವ

ಧನ್ಯವಾದ

ಪೂರ್ಣಿಮಾ ರಾಜೇಶ್
ಕಾವ್ಯ -ನಾಮ ಬಸು -ಮಲ್ಕಿ
ಬೆಂಗಳೂರು









Leave a Reply