ನಮ್ಮ ಭಾರತ ಸುಂದರ ನಾಡು
ನಮ್ಮ ಹೆಮ್ಮೆಯ ತಾಯ್ನಾಡು!
ತ್ರಿವರ್ಣ ಧ್ವಜವು ಮೇಲೆ ಹಾರುತ
ಜೈ ಹಿಂದ್ ಘೋಷವು ಗಗನ ತುಂಬುತ!
ಕೇಸರಿ ಬಣ್ಣ ಧೈರ್ಯ ಕಲಿಸುತ
ಬಿಳಿಯ ಬಣ್ಣ ಶಾಂತಿ ಸಾರುತ!
ಹಸಿರು ಬಣ್ಣ ಸಮೃದ್ಧಿ ತರುತ
ಅಶೋಕ ಚಕ್ರ ಮುಂದೆ ಸಾಗುತ!
ಗಾಂಧೀ ತಾತನ ಸತ್ಯದ ದಾರಿ
ತೋರಿತು ನಮಗೆ ಬದುಕಿನ ದಾರಿ
ದೇಶಕ್ಕಾಗಿ ಹೋರಾಡಿದ ವೀರರು
ನಮ್ಮ ನಾಡಿನ ಅಮರ ನಾಯಕರು!
ಆಗಸ್ಟ್ ಹದಿನೈದು ಬಂದಾಗ
ಸಂಭ್ರಮವು ಎಲ್ಲೆಡೆ ಆಗ!
ಶಾಲೆಯಲಿ ಧ್ವಜವನು ಹಾರಿಸಿ
ದೇಶಭಕ್ತಿ ಗೀತೆಯ ಹಾಡಿಸಿ!
ನಾವು ಚಿಕ್ಕವರು ಕನಸು ದೊಡ್ಡದು
ಭಾರತ ಕಟ್ಟುವ ಮನಸು ಗಟ್ಟಿ!
ಒಗ್ಗಟ್ಟಿನಿಂದ ಮುಂದೆ ಸಾಗೋಣ
ಭಾರತದ ಕೀರ್ತಿ ಎತ್ತಿ ಹಿಡಿಯೋಣ!
ನಮ್ಮ ದೇಶವೇ ನಮ್ಮ ಉಸಿರು
ಭಾರತ ಮಾತೆಯೇ ನಮ್ಮ ತಾಯಿ!
ಎಂದೆಂದಿಗೂ ನಾವೆಲ್ಲ ಹೇಳೋಣ
ಜೈ ಹಿಂದ್! ಜೈ ಭಾರತ!
ಭುವನೇಶ್ವರಿ ರು ಅಂಗಡಿ
ಸರಕಾರಿ ಪ್ರೌಢಶಾಲೆ, ಕಲಹಾಳ