You are currently viewing ನಮ್ಮ ನೆಲ ನಮ್ಮ ಹೆಮ್ಮೆ

ನಮ್ಮ ನೆಲ ನಮ್ಮ ಹೆಮ್ಮೆ

ಪುಣ್ಯ ನೆಲದಲ್ಲಿ ಜನಿಸಿದೆವೆಂಬ
ಹೆಮ್ಮೆ ನಮ್ಮದು
ಸಂಸ್ಕೃತಿಯ ತವರು
ಭಾರತಾಂಬೆಯ ಮಡಿಲಿದು

ತ್ಯಾಗ ಬಲಿದಾನದ ಪ್ರತೀಕ
ನಾವು ಪಡೆದ ಸ್ವಾತಂತ್ರ್ಯ
ಭರತ ಭೂಮಿಯಕೊಳ್ಳೆ ಹೊಡೆಯಲು
ನಡೆದಿತ್ತು ಷಡ್ಯಂತ್ರ

ಬ್ರಿಟೀಷರ ದಾಸ್ಯದಿಂದ
ಮುಕ್ತಿ ಪಡೆದೆವೆಂಬ ಹೆಮ್ಮೆ
ಕೆಚ್ಚೆದೆ ವೀರರ ಯಶೋಗಾಥೆ
ನೆನಪಿಸೋಣ ದಿನಕ್ಕೊಮ್ಮೆ

ಜಯ ಪರಾಜಯದ ಕಥೆಯು
ನಿನ್ನ ಒಡಲಲಿ ತುಂಬಿದೆ
ನಾವ್ ಹುಟ್ಟಿದ ನೆಲದಲಿ
ಇತಿಹಾಸವೇ ಸೃಷ್ಟಿಸಿದೆ

ಸಹನಾವವತು ಶಾಂತಿ
ಮಂತ್ರ ಮೊಳಗಿದೆ
ದೇಶ ಭಕ್ತರ
ನೆತ್ತರಿಲ್ಲಿ ಹರಿದಿದೆ

ಸೊಗದ ಸುಧೆಯ ಸಂಸ್ಕೃತಿ
ನಮ್ಮ ನಾಡಿದು
ಕಲೆ ಸಾಹಿತ್ಯ
ಆಧ್ಯಾತ್ಮದ ತವರೂರಿದು

ಹಿಂದಿನ ಹೋರಾಟದ
ಹಾದಿ ದುರ್ಗಮ
ನಾವ್ ಸಾಗುವ
ಪಥವಿರಲಿ ಸುಗಮ

_80ನೇ ಸ್ವತಂತ್ರ ದಿನಾಚರಣೆ ಶುಭಾಷಯಗಳು_ 💐💐

ಉಷಾ ಪ್ರಶಾಂತ್ ಸಿದ್ದಾಪುರ









Leave a Reply