ಸಾಮಾಜಿಕ ಸಮಾನತೆಯ ಸಾರಿದ
ಅಸ್ಪೃಶ್ಯತೆಯ ವಿರುದ್ದ ಹೋರಾಡಿದ
ಆರ್ಥಿಕ ಸಬಲತೆಯನ್ನು ತಿಳಿಸಿದ
ಮಹಿಳಾ ಸಬಲೀಕರಣ ಮಾಡಿದ
ನೊಂದವರ ನ್ಯಾಯಕ್ಕಾಗಿ ಶ್ರಮಿಸಿದ
ಶಿಕ್ಷಣದ ಅವಶ್ಯಕತೆಯನ್ನು ಅರುಹಿದ
ಭುವಿಯ ಬೆಳಕು ಬಾಬಾಸಾಹೇಬ..
ಶತ-ಶತಮಾನದಿ ತುಳಿತಕ್ಕೊಳಗಾಗಿ
ಶತಾಯ ಗತಾಯ ಬದುಕು ನೂಕಿದ
ಸ್ಥಿತಿವಂತರ ಪಾದ ಹಿಡಿದು
ಗತಿ ಇಲ್ಲದ ಜೀವನ ನಡೆಸಿದ
ಜಾತಿ-ಮತಗಳ ಹೆಸರಲ್ಲಿ ತುಳಿಸಿಕೊಂಡ
ನೊಂದವರ ನೋವು ನಿವಾರಿಸಿದ
ನ್ಯಾಯಕ್ಕಾಗಿ ಹೋರಾಡಿದ
ಇವರೆ ನಮ್ಮ ಬಾಬಾಸಾಹೇಬ..
ಅಸ್ಪೃಶ್ಯತೆ ಅಳಿಸಲು ಬಂದು
ಸ್ಪೃಶ್ಯರ ಮನಸ್ಸನ್ನೂ ಗೆದ್ದು
ಅವಮಾನ ಅಪನಿಂದೆಯನು
ಸಹಿಸುತ್ತಲೇ ಮುನ್ನಡೆಡದವರು
ದೀನ ದಲಿತತನಕ್ಕೆ ಧಿಕ್ಕಾರ ಕೂಗಿ
ನೊಂದವರ ಬಾಳಿಗೆ ಬೆಳಕಾದವರು
ದಲಿತರ ಗುಡಿಸಿಲಿನೊಳಗೆ
ಜ್ಞಾನದ ದೀವಿಗೆ ಹಚ್ಚಿದವರು
ದಲಿತೋದ್ಧಾರದ ಕನಸು ಹೊತ್ತ
ಇವರೆ ನಮ್ಮ ಬಾಬಾಸಾಹೇಬ..
ಎಮ್. ಎಚ್. ಹಾಲ್ಯಾಳ
– ಕೋಳೂರು
– ಮುದ್ದೇಬಿಹಾಳ
– ವಿಜಯಪುರ.