ಬಾಂಬೆ ತೆಂಗು
₹100.00
| Book Details |
|---|
| Author : ರವೀಶ್ ಬೀರೂರು |
| Publisher : ಪ್ರತಿಧ್ವನಿ ಪ್ರಕಾಶನ |
| Pages : 78 |
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಸ್ವಾಮಿನಾಥ ಮತ್ತು ರಾಧಮ್ಮ ದಂಪತಿಗಳ ಪುತ್ರನಾಗಿ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಜನಿಸಿದ ರವೀಶ್ ರವರು ಎಂ.ಎ. ಎಂ.ಇಡಿ, ಕೆಸೆಟ್, ವರೆಗೂ ವಿದ್ಯಾಭ್ಯಾಸ ಮಾಡಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸುಮಾರು 22 ವರ್ಷಗಳಿಂದ ವೃತ್ತಿ ಜೀವನವನ್ನು ಮಾಡುತ್ತಿದ್ದಾರೆ. ವೃತ್ತಿ ಬದುಕಿನೊಂದಿಗೆ ‘ಸುಮಾರು 20 ವರುಷಗಳಿಂದ ತನ್ನೊಳಗೆ ತಲ್ಲಣಿಸುವ ಭಾವನೆಗಳಿಗೆ ಅಕ್ಷರರೂಪವನ್ನು ನೀಡುತ್ತ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಕಥೆ, ಕವನ, ಚಟುಕು, ಲೇಖನ ಹೀಗೆ ವಿಭಿನ್ನ ಪ್ರಕಾರದ ಸಾಹಿತ್ಯ ರಚನೆಯನ್ನು ಹವ್ಯಾಸವಾಗಿರಿಸಿಕೊಂಡು ನಿರಂತರವಾಗಿ ಸ್ವ ಅನುಭವ, ಬದುಕು, ಸಮಾಜ, ಪ್ರಕೃತಿ ಮತ್ತು ನಮ್ಮ ನಡುವಿನ ವಿವಿಧ ವಿಷಯಗಳನ್ನು ಗ್ರಹಿಸುತ್ತ ಅವುಗಳೊಂದಿಗೆ ತನ್ನ ಭಾವನೆಗಳ ಮೂಲಕ ಮಾತನಾಡುವ, ಪ್ರಶ್ನಿಸುವ, ಉತ್ತರಿಸುವ ಕಾರ್ಯವನ್ನು “ಬಾಂಬೆ ತೆಂಗು” ಎಂಬ ಅವರ ಚೊಚ್ಚಲ ಕವನ ಸಂಕಲನದಲ್ಲಿ ಮಾಡಿದ್ದಾರೆ. ಕವಿ, ಸಾಹಿತಿ ಈ ಸಮಾಜದ ದನಿಯಾಗುವ ಗುಣವನ್ನೆ ಇವರು ಮುಂದುವರೆಸಿದ್ದಾರೆ. ಶೈಕ್ಷಣಿಕ ವೃತ್ತಿ ಬದುಕು ಮತ್ತು ಸಾಹಿತ್ಯಕ್ಕೆ ಭವ್ಯವಾದ ನಂಟು ಇತಿಹಾಸದಿಂದಲೂ ಇದೆ. ಶಿಕ್ಷಣ ಮಾಡುವ ಮೂಲಕ ಶಿಕ್ಷಕರಾಗಿ ಕವಿಯಾಗುವ ಮೂಲಕ ಮಾರ್ಗದರ್ಶಕನಾಗ ಹೊರಟಿರುವ ರವೀಶ್ ರವರಿಗೆ ಅಭಿನಂದನೆಗಳು ಮುಂದಿನ ದಿನಗಳಲ್ಲಿ ಇವರ ಸಾಹಿತ್ಯದಿಂದ ಉತ್ತಮವಾದ ಕೃತಿಗಳು ಮೂಡಿಬರಲಿ ಎಂದು ಆಶಿಸುತ್ತ ಸಾಹಿತ್ಯದ ಸಾರಸತ್ವ ಜಗತ್ತಿಗೆ ಸ್ವಾಗತ ಬಯಸುತ್ತೇನೆ. ಇವರ ಈ ಚೊಚ್ಚಲ ಕವನ ಸಂಕಲನಕ್ಕೆ ಶುಭವಾಗಲಿ.



Reviews
There are no reviews yet.