ಚೆಲ್ವ ನಮ್ಮ ಈ ಕನ್ನಡ ನಾಡು
ಕಣ್ತೆರೆದು ಒಮ್ಮೆಯಾದರೂ ನೋಡು
ಪಂಪ ಪೊನ್ನ ರನ್ನ ಜನ್ನರ ಬೀಡು
ಕುವೆಂಪು ಬೇಂದ್ರೆ ಹಾಡಿದ ಹಾಡು
ಹುಲಿ ಸಿಂಹ ಚಿರತೆ ಘರ್ಜಿಸಿದ ಕಾಡು
ಬಾನೆತ್ತರದಲಿ ಬೆಳೆದ ಸುಂದರದ ಮೇಡು..
ಕೃಷ್ಣೆ ಕಾವೇರಿ ಭೀಮೆ ಹರಿದಿಹರಿಲ್ಲಿ
ಹೊನ್ನೆ ತೇಗು ಶ್ರೀಗಂಧ ಬೆಳೆದಿಹುದಿಲ್ಲಿ
ರಾಜ ಮಹಾರಾಜರು ಮೆರೆದಿಹರಿಲ್ಲಿ
ಸಾಧು ಸಂತರು ಸತ್ಯ ಸಾರಿದರಿಲ್ಲಿ..
ಬೇಲೂರು ಹಳೇಬೀಡು ಐಹೊಳೆ ಪಟ್ಟದಕಲ್ಲು
ಹಂಪೆ ಹೊರನಾಡು ಸುಂದರದ ಮೈಸೂರು
ವಿಜಯಪುರದ ವಿಶ್ವವಿಖ್ಯಾತ ಗೋಳಗುಮ್ಮಟ
ಶ್ರವಣಬೆಳಗೊಳದಲಿ ನಿಂತ ಎತ್ತರದ ಗೊಮ್ಮಟ..
ಭತ್ತ ಬೆಳೆಯುವ ಮುತ್ತಿನಂತಹ ನಾಡು
ಹತ್ತಿ ಬೆಳೆಯುವ ಕಪ್ಪು ಮಣ್ಣಿನ ಬೀಡು
ಕಬ್ಬು ಕಡಲೆ ಜೋಳ ಬೆಳೆವ ರೇಷ್ಮೆಯ ಗೂಡು
ಎಲ್ಲೆಲ್ಲಿಯೂ ಹಸಿರಾದ ಶ್ರೀಗಂಧದ ನಾಡು..
ಎಮ್. ಎಚ್. ಹಾಲ್ಯಾಳ
ಕೋಳೂರು
ಮುದ್ದೇಬಿಹಾಳ
ವಿಜಯಪುರ