ಎಂದಿಗೂ ಕನ್ನಡ
ಬೆಳಗಾವಿ ಕನ್ನಡಮ್ಮನ ಒಡವೆ
ಮಹಾರಾಷ್ಟ್ರ ಕ್ಕೇಕೆ ಅದರ ಗೊಡವೆ ?
ಕೇರಳದ ಕಾಸರಗೋಡು ನಮ್ಮಯ ಹಿರಿಯ ಮನೆ ಮಗಳೇ
ಬಂದೇ ಬರುವಳು ತನ್ನ ನಾಡಿಗೆ ಇಂದಲ್ಲ ನಾಳೆ
ಗಡಿ ಪ್ರಶ್ನೆಯಬ್ಬಿಸಿ
ಶಾಂತವಾಗಿದ್ದವರ ನೆಮ್ಮದಿ ಕೆಡಿಸಿ
ರಾಜಕೀಯ ಬೇಳೆ ಬೇಯಿಸಿಕೊಂಡು
ಹೋಳಿಗೆ ಉಣ್ಣುವರು ಕೆಲವರು
ಮನಬಂದಂತೆ ಹೇಳಿಕೆ ಕೊಡುವರು
ಕಮಲ್ ಹಾಸನ್ಗೆಕೆ ಇದರ ಬಗ್ಗೆ ಅಪಾರ ಚಿಂತೆ
ಯಾರೇ ಕನ್ನಡ ಪತ್ರಿಕೆಗಳ ಸುಟ್ಟರೂ
ಬೆಳಗಾವಿ ಕನ್ನಡಮ್ಮನ ಉಸಿರು
ಮಹಾರಾಷ್ಟ್ರದ ಕೆಲ ಕನ್ನಡ ಭಾಷಿಕ ತಾಲೂಕು
ಕೇರಳದಲ್ಲಿಯ ನಮ್ಮ ಕಾಸರಗೋಡು
ಸೇರಬೇಕೆಂದರೆ ಕರ್ನಾಟಕದ ನಕಾಶೆಯಲ್ಲಿ
ಶೀಘ್ರವೇ ಮಹಾಜನ ವರದಿ ಜಾರಿಗೆ ಬರಲಿ
ಹಿಂದಿ ಹೇರಿಕೆ ನಾಶವಾಗಲಿ
ಬೆಳಗಾವಿ ಕಾಸರಗೋಡುಗಳು ಕನ್ನಡಮ್ಮನ ಕರುಳ ಕುಡಿಗಳು
ಅವುಗಳನ್ನ ವಿಭಜಿಸಲು ಮುಂದಾದವರನು
ಎಂದೂ ಸಹಿಸರು ಕನ್ನಡ ಕುವರರು
ಮಧುಸೂದನ್ ಜಗದೀಶ್ ಕಡೆಮನಿ
ಶಿವಮೊಗ್ಗ,ವಿದ್ಯಾನಗರ