ಮುಚ್ಚಬ್ಯಾಡಿರಿ ಮುಚ್ಚಬ್ಯಾಡಿರಿ
ಕನ್ನಡ ಸಾಲಿನಾ
ಕನ್ನಡ ಭಾಷೆ ಹಾಳಾಗಿ ಹೋಗತೈತಿ
ತಿಳಿದು ನೋಡ್ರಿ ನೀವ
ದೂರದ ಗುಡ್ಡ ಕಣ್ಣಿಗೆ ನುಣ್ಣನೆ
ಕಾನುವದು ಅಂದ ಚಂದ
ಸಮೀಪ ಹೋದಾಗ ಅದರ ಗತಿ
ಏನಾಗೈತಿ ಅನ್ನೋದ
ಹಳ್ಳಿಗಳಲ್ಲಿ ಮಾತ್ರ ಉಳಿದೈತಿ
ಕನ್ನಡ ಕರೇನ
ನಗರಗಳಲ್ಲಿ ಕನ್ನಡ ಭಾಷೆ
ಅಷ್ಟಕಷ್ಟೇನ
ಸರಕಾರದವರು ತಿಳಿದು ನೋಡಿರಿ
ಇದರ ಸ್ಥಿತಿ-ಗತಿಯನ್ನ
ಮುಚ್ಚಬ್ಯಾಡಿರಿ ಮುಚ್ಚಬ್ಯಾಡಿರಿ
ಕನ್ನಡ ಸಾಲಿನಾ
ಬಸಲಿಂಗಯ್ಯ ಮಠಪತಿ
ಕನ್ನಡ ಉಪನ್ಯಾಸಕರು ವಾಗ್ರೇವಿ ಸ್ವತಂತ್ರ
ಪ.ಪೂ ಕಾಲೇಜು, ಶೀಗಿಕೇರಿ-ಬಾಗಲಕೋಟೆ