ನಮ್ಮ ಕರುನಾಡ ಸೀಮೆ
ವೈಭೋಗ ಸಿರಿಯ ಹೊತ್ತ ನಾಡು
ಸಿರಿತನದ ಮಾತೃ ಭೂಮೆ
ಭವ್ಯತೆ ಭಾವೈಕ್ಯತೆಯ ಕರುನಾಡು
ನಾನ ವಿಧದ ಸಮೃದ್ಧವಾದ ಸಸ್ಯಕಾಶಿ
ಆ ಸೊಗಡು ಸೇವಿಸಿ ಬಾಳಿದೆ ಜೀವರಾಶಿ
ನಾದ ಕಾವ್ಯ ಲೇಖನ ಶಿಲ್ಪಕಲೆಗಳ ಭಂಡಾರ
ಬಾವುಟದಲ್ಲಿದೆ ಅರಿಶಿಣ ಕುಂಕುಮದ ಸಿಂಧೂರ
ರಾಜವಂಶಗಳು ಕಟ್ಟಿ ಬೆಳೆಸಿದ ನಾಡು
ಶೌರ್ಯ ಸಾಹಸದ ಯಶೋಗಾಥೆಯಬೀಡು
ಕವಿಗಳು ನಾಟ್ಯ ನೃತ್ಯ ವಾದ್ಯ ಕಲೆಗಳ ಮೆರೆಸಿದ
ಏಕೈಕ ಕಲಾ ಸಂಸ್ಕೃತಿಯ ನಮ್ಮ ಕರುನಾಡು
ಶ್ರೀಮಂತಿಕೆಯ ಫಲವ ಹೊತ್ತಿದೆ ಈ ಮಣ್ಣು
ವಿಶಾಲ ಮನದ ಪ್ರಜೆಗಳೇ ಈ ನೆಲದ ಹೊನ್ನು
ಎಂದೆಂದಿಗೂ ಕನ್ನಡ ಕರುನಾಡಿನ ಅನುಯಾಯಿ
ನಮನಗಳು ನಿನಗೆ ಕನ್ನಡಿಗರ ಭುವನೇಶ್ವರಿ ತಾಯಿ
ವಿನಯ್ ಪಿ ಭಾವಿ