You are currently viewing ಕನ್ನಡದ ಮಾತು ಒಂದೊಂದು ಮುತ್ತು

ಕನ್ನಡದ ಮಾತು ಒಂದೊಂದು ಮುತ್ತು

ಕನ್ನಡದ ಮಾತು ಸವಿಜೇನಿನ ಮುತ್ತು
ಕನ್ನಡದ ಅಕ್ಷರ ನಮ್ಮ ಸ್ವತ್ತು
ನಮ್ಮ ಭಾಷೆಯಲ್ಲಿದೆ ಗಾಂಭೀರ್ಯ ಗತ್ತು
ನಮ್ಮ ನಾಡು ನಿಂತಿದೆ ಇತಿಹಾಸ ಹೊತ್ತು
ಇದಕ್ಕೆ ಎರಡು ಸಾವಿರ ವರ್ಷಗಳ ಹಿನ್ನೆಲೆ ಇತ್ತು

ನವೋದಯ ನವ್ಯ ಪ್ರಗತಿಶೀಲ ಸಾಹಿತ್ಯ ಹೊಂದಿದೆ
ಪಂಪ ರನ್ನ ಪೊನ್ನ ಜನ್ನರ ಕೀರ್ತಿ ಇಲ್ಲಿ ಬೆಳಗಿದೆ

ವಚನಗಳಿಂದ ವಚನಾಮೃತ ಗಹಗಹಿಸಿ ಕೇಳಿದೆ
ಬಸವ ಅಲ್ಲಮ ಅಕ್ಕನ ವಚನಗಳು ಮೇಳೖಸಿದೆ
ದಾಸ ದಾಸ ದಾಸ ಎಂದು ದಾಸ ಸಾಹಿತ್ಯ ಮೆರೆದಿದೆ
ಕನಕ ಪುರಂದರ ವ್ಯಾಸರಿಂದ ಕೀರ್ತನೆ ಕಣ್ಣು ತೆರೆದಿದೆ

ಕುವೆಂಪುರಿಂದ ಕಂಬಾರರವರೆಗೆ ಸಾಹಿತ್ಯ ಲೋಕ ಗೌರವ ಪಡೆದಿದೆ
ಎಂಟು ಜ್ಞಾನಪೀಠ ಕನ್ನಡದ ಮುಡಿಗೇರಿದೆ.
ಓ ಕನ್ನಡದ ಕಂದ
ತಿಳಿಯೋ ನೀ ಕನ್ನಡದ ಬಂಧಾ
ನಿನಗಿದೆ ಈ ನಾಡಿನ ಋಣಾನುಬಂಧ
ತೀರಿಸುವ ಮಗನಾಗು ಈ ಕ್ಷಣದಿಂದ
ಜೈ ಕನ್ನಡಾಂಬೆ

ಸವಿತಾ ಚರಂತಿಮಠ
ಹಿರೇಬಾಗೇವಾಡಿ
ಬೆಳಗಾವಿ