ಕನ್ನಡ ನಾಡು ಸಿರಿಗಂಧದ ಬೀಡು
ಈ ನುಡಿ ಕರಣಗಳಿಗೆ ಇಂಪು
ಕನ್ನಡಿಗರ ಮನ ಯಾವತ್ತೂ ತಂಪು
ಧರ್ಮ, ಜಾತಿ,ಪಂಗಡಗಳ ಭೇದವಿಲ್ಲದ ನಾಡು.
ಧೈರ್ಯ ಸ್ಥೈರ್ಯ ಮೆರೆದ ನಾಡು
ಕವಿಪುಂಗವರ ಸಾಹಿತಿಯರ ಹಾಡಿದು
ಕೆಚ್ಚೆದೆಯ ಕಲಿಗಳ ವೀರ ಶೂರರ ಬೀಡಿದು
ಪ್ರೀತಿಯಿಂದ ಅಪ್ಪಿಕೊಂಡು ಸ್ನೇಹ ತೋರುವ ತಾಯ್ನಾಡಿದು.
ಕರುಣೆ ತುಂಬಿದ ಕರುನಾಡಿದು
ನಮ್ಮ ನುಡಿ ಸಿಹಿ ಜೇನಿನಂತಿದೆ
ಕನ್ನಡಿಗರ ಮಾತು ಕೇಳಿದರೆ ಅಮೃತ ಕುಡಿದಂಗೆ ಇರುತ್ತದೆ
ಕನ್ನಡಿಗರ ಮನಸು ಹೂವಿನಂತೆ ಸುಮಧುರವಾಗಿರುತ್ತದೆ.
ನಾಡು ನುಡಿ ಕನ್ನಡಿಗರ ಉಸಿರು
ಇಲ್ಲಿಯ ನೆಲ ಜಲವೇ ಬಾಳಿಗೆ ಹಸಿರು
ಈ ಭೂಮಿಯು ಸ್ವರ್ಗದ ಸಿರಿಯು
ಇಲ್ಲಿ ಹುಟ್ಟಿರುವುದೇ ನಮ್ಮ ಪುಣ್ಯವು.
ಕನ್ನಡದ ಬಾವುಟ ಹೊಂದಿದೆ ಎರಡು ಬಣ್ಣವೂ
ಅದು ನಮ್ಮ ಮುತ್ತೈದೆಯರ ಶೃಂಗಾರವು
ಕನ್ನಡಿಗರ ನರ ನಾಡಿಯಲ್ಲಿ ಹರಿಯುತ್ತಿದೆ ಕನ್ನಡದ ಅಭಿಮಾನ
ಸಮರಕ್ಕೂ ಸಿದ್ಧ ಸ್ನೇಹಕ್ಕೂ ಬದ್ಧ ಕನ್ನಡಿಗರ ಸ್ವಾಭಿಮಾನ.
ಜ್ಯೋತಿ ಬಸವರಾಜ ಬೆಳವಿ
ಜಿಲ್ಲೆ ಬೆಳಗಾವಿ
ತಾಲೂಕು ಹುಕ್ಕೇರಿ
8088565906
7760258300