ನನ್ನ ನಾಡಿದು ಕನ್ನಡ, ಸೂರಿನ ಸಿರಿಗನ್ನಡ
ಇದೋ ತಪೋ ಮಂದಿರ
ನೀಲಿ ಬಾನ ಹಂದರ
ಬೆಳದಿಂಗಳ ಚಂದಿರ
ನನ್ನ ನಾಡೆss ಸುಂದರ
ಕಾವೇರಿಯ ಕುರುಹಿದು
ಭುವನೇಶ್ವರಿ ಗುಡಿಯಿದು
ನನ್ನ ನಾಡಿದು ಕನ್ನಡ
ಕನ್ನಡಿಗರ ಧರೆಯಿದು
ಕವಿಗಳ ನೆಲೆ ಕನ್ನಡ
ಹೊನ್ನು ಬೆಳೆವ ಕಡಲಿದು
ಪಂಪ ನೆಲೆಯ ನಾಡಿದು
ಸಿರಿ ನುಡಿಯ ಕನ್ನಡ
ಚಂದನದ ಚೆಲುವಿದು
ತೆಂಗಿನಂಗಳ ನೆಲವಿದು
ಒಲವಿನ ಉದ್ಯಾನವು
ನಲುಮೆಯ ತಾಯ್ನಾಡಿದು
ಕನ್ನಡಿಗರ ಕರುನಾಡಿದು
ಶಾಂತಿ ನೆಲೆಯ ಬೀಡಿದು
ಸಮೃದ್ಧಿಯ ಮಡುವಿದು
ನನ್ನೊಲುಮೆಯ ಅರಿವದು
ಪ್ರೊ. ಮೈಬೂಬಸಾಹೇಬ. ವೈ.ಜೆ.
ಸಹಾಯಕ ಪ್ರಾಧ್ಯಾಪಕರು-
ಮಹಿಳಾ ಮಹಾವಿದ್ಯಾಲಯ-ವಿಜಾಪುರ