ಅದ್ಬುತ ಅಮೋಘ ನನ್ನಯ ಕರುನಾಡು
ಆಲಾಪಕೆ ಸೋತಿದೆ ಮನ ಕನ್ನಡ ಇಂಪನು ಕಂಡು
ಇಲ್ಲೇ ಇರಲು ಜೀವವ ಸೆಳೆದಿದೆ ಕನ್ನಡ ಕಂಪಿನ ಸೊಗಡು
ಈ ನಾಡಲಿ ಬದುಕುವುದೇನಗೆ ನಿತ್ಯ ಸಂತಸದ ಪಾಡು
ಉರಿಸು ಕನ್ನಡದ ಸಾಹಿತ್ಯ ಸಂಪತ್ತಿನ ದೀವಿಗೆ
ಊದು ಕನ್ನಡ ಕಹಳೆಯ ನಾಡಿನ ಏಳ್ಗೆಗೆ
ಋಣ ತೀರಿಸಲು ಸಾಧ್ಯವೇ ಕನ್ನಡಾಂಬೆ ಭುವನೇಶ್ವರಿಗೆ
ಎಲ್ಲೆ ಇದ್ದರೂ ನೀ ಕನ್ನಡವಾಗಿರು ಅದೇ ಭಾಷೆಯ ಬೆಳವಣಿಗೆ
ಏರಿಕೆಯಾಗಲಿ ಕನ್ನಡ ಭಾಷೆಯ ಬಳಕೆ
ಒಗ್ಗಟ್ಟಿರಲಿ ಕನ್ನಡಿಗರಲಿ ಅದೇ ಕನ್ನಡಾಂಬೆಯ ಬಯಕೆ
ಓದು ಕನ್ನಡ ಹಾಡು ಕನ್ನಡ ನುಡಿ ಕನ್ನಡ ಹೆಚ್ಚಾಗಲಿ ಕಲಿಕೆ
ಔನತ್ಯ ಆಗಲಿ ಕರುನಾಡ ಸಂಪತ್ತಿನ ಬಳಕೆ
ಅಂದ ಚಂದದ ಕಲೆ ಕವಿ ಸಾಹಿತಿಗಳಿಗೆ ಆಶ್ರಯ ತಾಣ
ಅಹಂಭಾವ ವಿರಲಿ ನಾನು ಕನ್ನಡಿಗನೆಂಬ ಕಾರಣ
ಭಕ್ತಿ ಭಾವ ವಿರಲಿ ನಿತ್ಯ ನಮಿಸು ಭುವನೇಶ್ವರಿಯ ಚರಣ
ಎಂದೆಂದಿಗೂ ಕರುನಾಡಿಗಾಗಿ ಮುಡಿಪಾಗಿರಲಿ ನಮ್ಮ ಹರಣ
ವೀಣಾ ವಿನಾಯಕ
ಹೊನ್ನಾವರ