You are currently viewing ಕಲ್ಪವೃಕ್ಷದ ನಾಡು ಕರುನಾಡು..

ಕಲ್ಪವೃಕ್ಷದ ನಾಡು ಕರುನಾಡು..

ಕಪ್ಪು ಮಣ್ಣಿನ ಕಲ್ಪವೃಕ್ಷದ ನಾಡು
ಮಲೆನಾಡ ಸೊಬಗಿನ ಶ್ರೀಗಂಧದ ಬೀಡು
ಹಲವು ಕವಿರತ್ನರು ಇರುವ ಗೂಡು
ಕೇಳಿ ಆನಂದಿಸಿ ಕನ್ನಡ ನುಡಿಯ ಹಾಡು

ಸಾವಿರಾರು ವರ್ಷಗಳ ಇತಿಹಾಸವಿರುವ ಭಾಷೆಯು
ಎಂಟು ಜ್ಞಾನಪೀಠ ಪಡೆದ ನಲ್ಮೆಯ ಹಿರಿಮೆಯು
ಬೇಲೂರು ಹಳೇಬೀಡು ಹಂಪಿಯ ಶಿಲ್ಪಕಲೆಯು
ವಿವಿಧತೆಯಲಿ ಏಕತೆಯ ಸಂಸ್ಕೃತಿಯ ಪರಂಪರೆಯು

ಬಳಸಿದಷ್ಟು ಬೆಳೆಯುವ ಭಾಷೆ ಕನ್ನಡ
ಮಾತನಾಡಿದಷ್ಟು ಮೆರಗು ಬರುವ ಭಾಷೆ ಕನ್ನಡ
ಬರೆದಷ್ಟು ಭಾವನೆ ಹೆಚ್ಚಾಗುವ ಭಾಷೆ ಕನ್ನಡ
ಓದಲು ಬಾರದವರಿಗೂ ಅರ್ಥವಾಗುವ ಭಾಷೆ ಕನ್ನಡ

ಕರುನಾಡಿನ ನೀರು ದೇವರ ತೀರ್ಥದಂತೆ
ಈ ನೆಲದ ಅನ್ನ ಪವಿತ್ರ ಪ್ರಸಾದದಂತೆ
ಕರ್ನಾಟಕದಲಿ ನಡೆದರೆ ದೇವಸ್ಥಾನದಲಿ ನಡೆದಂತೆ
ಈ ಪುಣ್ಯ ಭೂಮಿಯಲಿ ಮಲಗಿದರೆ ಸ್ವರ್ಗದಲಿ ಮಲಗಿದಂತೆ

ಕರುನಾಡು ಎಲ್ಲ ಭಾಷೆಗಳ ತವರೂರಾಗಿದೆ
ಹಲವು ಧರ್ಮಗಳ ಹೆಮ್ಮೆಯ ನೆಲೆಯಾಗಿದೆ
ಮೂವತ್ತೊಂದು ಜಿಲ್ಲೆಗಳ ಒಗ್ಗಟ್ಟಿನ ನಾಡಾಗಿದೆ
ಕೆಂಪು ಹಳದಿ ನಾಡ ಧ್ವಜದಿ ಕಂಗೊಳಿಸುತ್ತಿದೆ

ಬಿಟ್ಟುಬಿಡೋಣ ಎನ್ನಡ ಎಮ್ಮಡ ಎಕ್ಕಡ
ಬರಲಿ ಹೃದಯದಿಂದ ಕನ್ನಡ ಕನ್ನಡ ಕನ್ನಡ
ಆಗದಿರೋನ ನವೆಂಬರ್ ಒನ್ ಕನ್ನಡಿಗ
ಆಗೋಣ ಸದಾ ಕಾಲ ನಂಬರ್ ಒನ್ ಕನ್ನಡಿಗ

ವರ್ಣಿಸಲು ಕಾಡುತ್ತಿದೆ ಮನದಲಿ ಪದಗಳ ಕೊರತೆ
ಕಲೆ, ಸಾಹಿತ್ಯದಲ್ಲಿ ಎಂದೂ ಬತ್ತದ ಒರತೆ
ಪ್ರತಿ ಕ್ಷಣ ಹಾಡೋಣ ಕನ್ನಡ ನಿತ್ಯೋತ್ಸವ
ಅನು ದಿನ ಆಚರಿಸೋಣ ಕನ್ನಡ ರಾಜ್ಯೋತ್ಸವ

ಮುತ್ತು ಯ ವಡ್ಡರ
ಶಿಕ್ಷಕರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ
ತಾ – ಹುನಗುಂದ
ಜಿಲ್ಲೆ – ಬಾಗಲಕೋಟ
Mob -9845568484