You are currently viewing ಸಿರಿಗಂಧದ ತವರಿನಲಿ

ಸಿರಿಗಂಧದ ತವರಿನಲಿ

ನಾವಾಡುವ ನುಡಿ
ಕನ್ನಡ ಮಯವಾಗಿರಬೇಕು
ಅವರೀವರ ನುಡಿಗೋಡಗೂಡಿ
ಕನ್ನಡ ನುಡಿಗೇಡಬಾರದು…

ನನ್ನೊಡನೆ ನಡೆ-ನುಡಿಯಾಗಿ
ತನ್ನೊಡಲ ಗುಡಿಯಾಗಿ
ಕನ್ನಡವ ಪೂಜಿಸೋಣ
ಕನ್ನಡಿಗರೇಲ್ಲಾ ಒಂದಾಗಿ
ಸಿರಿಗನ್ನಡಕ್ಕೆ ಶಿರಬಾಗಿ.

ಸಾವಿರ ನುಡಿಯೋಳಗಿನ
ಕನ್ನಡದ ಒಡೆಯನೆ
ಓಡೋಡಿ ಬಾ
ಕನ್ನಡೋತ್ಸವ ಆಚರಿಸೋಣ
ವಿಶ್ವದ ತುಂಬೆಲ್ಲ.

ಕನ್ನಡದ ನೆನಪಿಟ್ಟು
ಕರುಣೆಯಾ ಕಣ್ಣಿಟ್ಟು ಬಾಳು ಎಲ್ಲರೊಳಗೋಂದಾಗಿ
ಸಿರಿಗಂಧದ ತವರಿನಲಿ.

ಕಲ್ಪನೆಯ ಕಲೆಯೆಲ್ಲಾ
ಕನ್ನಡದ ಕಲ್ಲು ಕಲ್ಲಿನಲಿ ಚಿತ್ತರಿಸಿ
ಕಲ್ಲರಳಿಸಿ ನಲಿಸಿದರು
ಕನ್ನಡದ ಸವಿ ಪದವ.

ಕನ್ನಡದಾ ಬೀಡಿನಲಿ
ಕವಿ ಕಂಪು ಚೆಲ್ಲಿಹರು
ಕುವೆಂಪು ಬೇಂದ್ರೆ ಕಾರಂತ ಆಸ್ತೀ ಸರ್ವೋತ್ತಮರ ಉದಯವಿಲ್ಲಿ.

ಕವಿ ರಾಜರಿಲ್ಲಿ
ರವಿ ತೇಜರಿಲ್ಲಿ
ಗುರು ಪೂಜ್ಯರಿಲ್ಲಿ
ಬಸವಾದಿ ಶರಣ ಸಂತರಿಲ್ಲಿ
ಜಾಣಾದಿ ಜಾಣರ ಬಳಗವಿಲ್ಲಿ
ನಿತ್ಯ ಹೊಸತನದ ಹರುಷವಿಲ್ಲಿ
ಕನ್ನಡಿಗರ ಬಾಳುವೆಯಲ್ಲಿ.

ಕನ್ನಡಾಭಿಮಾನಿಯಾಗಿ
ಕನ್ನಡ ಕಲಾ ನಿಧಿಯಾಗಿ
ವೀರಾಧೀವೀರರ ನಾಡವರಾಗಿ
ಬಾಳೋಣ ಎಂದೆಂದೂ
ಕನ್ನಡಾಭೀಮಾನಿಯಾಗಿ.

ಸಿರಿಗನ್ನಡದ ತುಂಬೆಲ್ಲ
ಕೋಗಿಲೆಯು ಹೆಚ್ಚಾಗಿ
ಸಂತಷದ ಋತುಮಾನ ಹಗಲಿರುಳಾಗಿ
ನಿತ್ಯ ಹಾಡುತಿರಲಿ
ಕನ್ನಡದ ಕವಿ ಪದವ.

ಕನ್ನಡದ ಅಭಿಮಾನಿಯಾಗಿ
ಕನ್ನಡಮ್ಮನ ಕಲ್ಪವೃಕ್ಷ ತನ್ಮಯವಾಗಿ, ಅಭೀಮಾನದಿ ಅನುದಿನವೂ ದುಡಿಯೋಣ ಕನ್ನಡದ ಮಣ್ಣಲ್ಲಿ
ಬೆಳೆಯೋಣ ಹಸಿ ಹಸಿರ ಹೊನ್ನ
ಅನುದಿನವೂ ಹಾಡೋಣ ಕನ್ನಡಮ್ಮನ ಗೀತ.

ಕನ್ನಡದ ನೆಲ ನೋಡಿ
ಕನ್ನಡದ ಜನ ನೋಡಿ
ಕೈಲಾಸ ಬಿಟ್ಟು ಶಿವ ಓಡಿ ಬರಲಿ
ಕನ್ನಡವೇ ಲೇಸೆಂದು
ಕನ್ನಡವೇ ಲೇಸೆಂದು…

ಚಂದ್ರಶೇಖರ ಸಿಂಗಾಡಿ
ಕನಮಡಿ
ತಾಲೂಕು: ತಿಕೋಟಾ
ಜಿಲ್ಲೆ : ವಿಜಯಪುರ
ಮೊಬೈಲ್ ಸಂಖ್ಯೆ: 9880090655