ಆಹಾ ನೋಡು ಎಷ್ಟು
ಚಂದ ನಮ್ಮ ಕನ್ನಡ
ಓಹೋ ನೋಡು ಎಷ್ಟು
ಸರಳ ನಮ್ಮ ಕನ್ನಡ
ತಾಯಿ ಭಾಷೆ ಎಂದರೆ
ಸರಳ ಅಲ್ಲವೇ
ಅದನ ಕಲಿಸಿದವಳು
ತಾಯಿ ಅಲ್ಲವೇ
ತೊದಲೇ ಮೊದಲಾಗಿ
ಬೆಳಿಯೋ ಕನ್ನಡ
ಕೊನೆಯ ತನಕ ನಮ್ಮನು
ಬೆಳಿಸೋ ಕನ್ನಡ
ಕನ್ನಡ ನಾಡಿನಲ್ಲಿ ಕಂಪು
ಸೂಸೋ ಕನ್ನಡ
ಭಾರತ ದೇಶದಲ್ಲಿ ಸೊಂಪು
ನಮ್ಮ ಕನ್ನಡ
ನಾನು ಕನ್ನಡಿಗ ನನ್ನ
ಜನ್ಮ ಸಾರ್ಥಕ
ಮಾಡಬೇಕು ಕನ್ನಡ
ಕಾಯುವ ಕಾಯಕ
ಭುವನೇಶ್ವರಿ ರು. ಅಂಗಡಿ
ನರಗುಂದ, ಗದಗ