You are currently viewing ನನಸಾಗದ ಕನಸು

ನನಸಾಗದ ಕನಸು

ಗಾಂಧೀಜಿ ಕಂಡದ್ದು
ರಾಮ ರಾಜ್ಯದ ಕನಸು
ಮತ್ತೊಮ್ಮೆ ಹುಟ್ಟಿ
ಬರಬೇಕು
ಆಗಲು ನನಸು

ಗಾಂಧೀ ಸೀಟು ಗಾಂಧೀ ಟೋಪಿ
ಎಂದು ಗೇಲಿ ಮಾಡುವರೆಲ್ಲ
ಗೇಲಿಮಾಡುವ ಬಾಯಿಗೆ
ಆಹಾರವಾಗಿ ಬಿಟ್ಟರಲ್ಲ

ಹನ್ನೆರಡು ಗಂಟೆ ರಾತ್ರಿ ಹೊತ್ತಲ್ಲಿ
ಹೆಣ್ಣೊಬ್ಬಳೆ ನಡೆಯಬೇಕೆಂದರು
ಹಗಲು ಹೊತ್ತಲ್ಲೇ ಕಾಮುಕರು ನಿನ್ನ
ಬಿಡುವುದಿಲ್ಲವೆಂದರು

ಇಂದಿನ ದಿನಗಳಲಿ
ಗಾಂಧೀಜಿಯವರು ಇದ್ದಿದ್ದರೆ
ಘೋಡ್ಸೆಗೆ ಕೊಲ್ಲಲು
ಇರುತ್ತಿರಲಿಲ್ಲ ತೊಂದರೆ

ಅವರೇ ನೇಣುಬಿಗಿದು
ಮರಣವನ್ನಪ್ಪುತಿದ್ದರು ಖರೆ
ನೋಡಲಾಗುತ್ತಿತ್ತೇ
ಈ ಹದಗೆಟ್ಟ ಸಮಾಜದ ತಿರೆ

ಗಳಿಸಿ ಕೊಟ್ಟ ಸ್ವಾತಂತ್ರ್ಯ
ಅರ್ಥಗೆಡಿಸಿದರು
ಈಗಲೂ ಅಧೀನದಲ್ಲಿಡಬೇಕಿತ್ತು
ಪರಂಗಿಯವರು

ಬುದ್ದಿಕಲಿಯುವ ಮಂದಿ
ಯಾರಿಲ್ಲ ಇಲ್ಲಿ
ಬದ್ದಿ ಕೆಡಿಸಿಕೊಂಡವರೇ
ಇರುವರು ನೋಡಿಲ್ಲಿ

ಜಯಂತಿಯ ಮಾಡಿ
ಹಾಡಿ ಹೊಗಳುವರು
ನೀ ಹಾಕಿಕೊಟ್ಟ ನ್ಯಾಯ
ನೀತಿ ಧರ್ಮದಲಿ ನೆಡೆಯದವರು

ನಂದಾ ಪ್ರೇಮಕುಮಾರ್
ಶಿಕಾರಿಪುರ