ಭಾವನೆ ಚೈತನ್ಯ ಹೊಮ್ಮಸು ದೊಡ್ಡದಾ
ಪ್ರೀತಿ ಪ್ರೇಮ ಸಹನೆ ತಾಳ್ಮೆದೊಡ್ಡದಾ
ಹುಡುಕುತ್ತಾ ಹೋದಂತೆಲ್ಲ ಇವು ಚಿಕ್ಕದಾಗಿದ್ದು
ಅದ್ಬುತವಾದ ತಾಯಿಯ ಮಡಿಲು ದೊಡ್ಡದು
ವ್ಯಕ್ತಿತ್ವದ ಕೈಗನ್ನಡಿ ಕಂಡಿದ್ದು ದೊಡ್ಡದು
ಪುಷ್ಪ ಸಿಂಚನ ಹರಿಸಿ ಹಾರೈಸಿದಳು
ಜೀವದಾನವು ನೀಡಿ ತಾಯಿಯಾದಳು
ಮುಕ್ತಿಯ ಮಂದಿರ ಎಲ್ಲಿದೆ ಎಂದು
ದಿನವು ಪ್ರಪಂಚ ಸುತ್ತಿದರು ಸಿಗದು
ಅಡಚಣೆ ಉಂಟಾಗಿದ್ದರು ಸೋಲದೆ ಇದು
ತಾಯಿ ನೀಡಿದ ಬರಹವೇ ಉಸಿರಾಗಿತ್ತು
ಸಿಗೋದು ಗ್ಯಾರಂಟಿ ಬೇರೆಯವರಲ್ಲಿ
ಅಮ್ಮನ ಮಡಿಲು ಅದ್ಭುತವು ಇಲ್ಲಿ
ಯಾರು ಅರಿಯದ ನೋವು ನೋಡಿಲ್ಲಿ
ಶ್ರದ್ಧಾ ಭಕ್ತಿಯು ಕೈಯಲ್ಲಿ ಹಿಡಿದು
ಮಹಾಂತೇಶ ಎಸ್ ಖೈನೂರ