You are currently viewing ಜಾತಿಯ ನಿರ್ಮೂಲನೆಯ ಹರಿಕಾರ

ಜಾತಿಯ ನಿರ್ಮೂಲನೆಯ ಹರಿಕಾರ

ಡಾ.ಬಾಬಾ ಸಾಹೇಬ ಅಂಬೇಡ್ಕರ ಅವರು ಒಬ್ಬ ವ್ಯಕ್ತಿಯಲ್ಲಿ ಅವರೊಬ್ಬ ಮಹಾನ್ ಶಕ್ತಿ ಜ್ಞಾನದ ಶಿಖರವನ್ನೇರಿ ಕುಳಿತ ಜ್ಞಾನದ ಸೂರ್ಯ, ಕಠಿಣ ಪರಿಶ್ರಮ ಮತ್ತು ಸ್ವ ಸಾಮಥ್ರ್ಯದಿಂದ ಈ ದೇಶದ ಅಗ್ರಗಣ್ಯ ರಾಷ್ಟ್ರನಾಯಕನಾಗಿ ಣಿಗೊಳಪಟ್ಟಿದ ಮೇರು ಪುರುµ ಡಾ.ಅಂಬೇಡ್ಕರ.ತಮ್ಮ ಅವಿರತ ಹೋರಾಟದಿಂದ ಈ ಹಿಂದಿನ ಸಮಾಜ ಸುಧಾರಕರು ಯಾರು ಸಾಧಿಸದಿದ್ದಂತ ಮಹಾಕ್ರಾಂತಿಯನ್ನು ಎಸಗಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು- ಡಾ.ಅಂಬೇಡ್ಕರ.

ಜಾತಿ ಸಮಸ್ಯೆಯನ್ನು ಅತ್ಯಂತ ಆಳವಾಗಿ ಅಧ್ಯಯನ ಮಾಡಿರುವ ಏಕೈಕ ಮಹಾನ್ ಚಿಂತಕ ಡಾ.ಅಂಬೇಡ್ಕರ ಧೈರ್ಯ ಜಾತಿಗೆ ಆಧಾರವಾದ ಧಾರ್ಮಿಕ ಕಲ್ಪನೆಗಳನ್ನು ನಿರ್ಮೂಲನೆಗೊಳಿಸಿದಾಗ ಮಾತ್ರ ಜಾತಿಯನ್ನು ಮುರಿದು ಹಾಕಲು ಸಾಧ್ಯ ಎಂಬ ಅವರ ತತ್ವ ಸಿಧ್ಧಾಂತವನ್ನು ಮೈಗೂಡಿಸಿಕೊಂಡವರು. ರಾಜಕೀಯ ಸುಧಾರಣೆಗಿಂತ ಸಾಮಾಜಿಕ ಸುಧಾರಣೆಯ ಅಗತ್ಯತೆ ಏಕೆ ಎಂಬುದನ್ನು ವಾಸ್ತವಿಕ ಅನಿಷ್ಟ ಘಟನೆಗಳ ಮೂಲಕ ಸಮಾಜದ ಇನ್ನೊಂದು ಮಗ್ಗಲನ್ನು ಡಾ.ಅಂಬೇಡ್ಕರ ಅವರು ನಿರೂಪಿಸುತ್ತಾರೆ.

ಪೇಶ್ವೆಗಳು ಆಳುತಿದ್ದ ಕಾಲದಲ್ಲಿ ಅಸ್ಪøಶ್ಯರನ್ನು ಹೇಗೆ ನಡೆಸಿಕೊಳ್ಳುತ್ತಿದ್ದರು ಎಂಬುದನ್ನು ವಾಸ್ತವಿಕ ಘಟನೆಗಳನ್ನಾಧರಿಸಿ ಗಮನದಲ್ಲಿಟ್ಟುಕೊಂಡು ಪ್ರಶ್ನೆ ಮಾಡುತ್ತಾರೆ ಡಾ.ಅಂಬೇಡ್ಕರ ಅವರು ಸಾರ್ವಜನಿಕ ಬಾವಿಗಳಿಂದ ನೀರು ತರಲಿಕ್ಕೆ ಕೊಡದವರು ರಾಜಕೀಯ ಅಧಿಕಾರ ಕೊಡುತ್ತಾರೆಯೇ?ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸಲು ಬಿಡದವರು ರಾಜಕೀಯ ಅಧಿಕಾರ ಕೊಡುತ್ತಾರೆಯೇ?ಬಟ್ಟೆಗಳನ್ನು ಉಡಲು, ಆಭರಣಗಳನ್ನು ಧರಿಸಲು ಬಿಡದವರು ರಾಜಕೀಯ ಅಧಿಕಾರ ಕೊಡುತ್ತಾರೆಯೇ?ಊಟದಲ್ಲಿ ತುಪ್ಪ, ಚಪಾತಿಯನ್ನು ತಿನ್ನಲು ಬಿಡದವರು ರಾಜಕೀಯ ಅಧಿಕಾರ ಕೊಡುತ್ತಾರೆಯೇ? ಇದು ಅಸಾಧ್ಯವಾದದ್ದು.ವಿಲರ್ ಹೇಳಿದಂತೆ ಒಂದು ವರ್ಗದ ಜನರನ್ನು ಆಳಲು ಇನ್ನೊಂದು ವರ್ಗದ ಜನರಿಗೆ ಅಧಿಕಾರವಿಲ್ಲ ಎಂಬುದನ್ನು ಪ್ರತಿಯೊಬ್ಬ ಹಿಂದೂ ಒಪ್ಪಿಕೊಳ್ಳಬೇಕೆಂದು ಅಂಬೇಡ್ಕರ ತಮ್ಮ ಭಾಷಣದಲ್ಲಿ ಪ್ರಶ್ನಿಸುತ್ತಾರೆ.



ಉಚ್ಚಜಾತಿಯ ಸಮಾಜ ಸುಧಾರಕ ಹಿಂದೂಗಳು ಕೇವಲ ವಿಧವಾ ಪುನರ್ ವಿವಾಹದ ಪ್ರತಿಪಾದನೆ ಬಾಲ್ಯ-ವಿವಾಹದ ವಿಶೇದ ಇವುಗಳನ್ನಷ್ಟೇ ಪ್ರತಿಪಾದಿಸುತ್ತಿದ್ದರು. ಏಕೆಂದರೆ ಈ ಸಮಸ್ಯೆಗಳನ್ನು ತಮ್ಮ ತಮ್ಮ ಕುಟುಂಬಗಳಲ್ಲಿ ಎದುರಿಸುತ್ತಿದ್ದರು.ಹೀಗಾಗಿ ಇದು ಕುಟುಂಬದ ಸುಧಾರಣೆಯಾಗಿತ್ತಷ್ಟೆ. ಜಾತಿಯ ನಿರ್ಮೂಲನೆ ಮಾಡಿ ಸಮಗ್ರ ಹಿಂದೂ ಸಮಾಜದ ಸುಧಾರಣೆಗೆ ಅವರು ಪ್ರಯತ್ನಿಸಲಿಲ್ಲ ಸವರ್ಗೀಯ ಹಿಂದೂಗಳ ಸುಧಾರಣೆ ಕುಟುಂಬ ಸುಧಾರಣೆ ಎನ್ನುವ ಸಂಕುಚಿತ ಅರ್ಥದಲ್ಲಿ ಅವರು ನಡೆಸಿದರು.

ಜಾತಿ ಪ್ರಜ್ಞೆ ಬಲಿಷ್ಟವಾಗಿ ಉಳಿದು ಬಂದಿರುವುದರಿಂದ ಜಾತಿ ಕಲಹಗಳಿಗೆ ಕುಖ್ಯಾತ ಪಡೆದಿದೆ.ಈ ಜಾತಿ ಕಲಹಗಳು ಪ್ರಾಚೀನ ಕಾಲದಿಂದ ಅಚ್ಚಳಿಯದ ನೆನಪುಗಳಾಗಿ ಉಳಿದಿದೆ ಇದರಿಂದ ಏಕತೆ ಮರೆಯಾಗಿಸಿದೆ ಎನ್ನುತ್ತಾರೆ ಡಾ.ಅಂಬೇಡ್ಕರ.ಜಾತಿ ಎಂಬುದು ಇಟ್ಟಿಗೆಗಳಿಂದ ಕಟ್ಟಿದ ಒಂದು ಕಟ್ಟಡವಲ್ಲ ಮುಳ್ಳು, ತಂತಿಯ ಬೇಲಿ ಅಲ್ಲ ಹೀಗಾಗಿ ಕೈಯಿಂದ ತೆಗೆದು ಹಾಕಲು ಸಾಧ್ಯವಿಲ್ಲ.ಜಾತಿ ಎಂಬುದು ಒಂದು ಮನೋಭಾವ ಜಾತಿ ವಿನಾಶವೆಂದರೆ ಅಂತಹ ಮನಸ್ಥಿತಿಯ ನಾಶ.ಆ ಮನಸ್ಥಿತಿಗೆ ಮುಖ್ಯವಾದ ಆಧಾರ ಎಂದರೆ ಹಿಂದೂ ಧರ್ಮದ ಗ್ರಂಥಗಳು, ವೇದ, ಶಾಸ್ತ್ರ, ಪುರಾಣಗಳಿವೆ. ಇವುಗಳ ಬೋಧಕರು ಯಾರು ಎಂದರೆ ಬ್ರಾಹ್ಮಣರು.

ಒಂದು ವೇಳೆ ಬ್ರಾಹ್ಮಣರು ಮುಂದಾಳತ್ವವಹಿಸಿ ಜಾತಿ ಪದ್ದತಿ ಒಂದು ಪಾಪ ಅದೊಂದು ಕಳಂಕ ಅದನ್ನು ನಿವಾರಿಸಲು ಮತ್ತು ಎಲ್ಲರ ಮನಃ ಪರಿವರ್ತನೆಗಾಗಿ ಹೋರಾಟ ಅದರಲ್ಲೂ ಕ್ರಾಂತಿಕಾರಿ ಹೋರಾಟ ಮಾಡಿದ್ದೇ ಆದರೆ ಜಾತಿ-ವಿನಾಶ ಸಾಧ್ಯವಿದೆ. ಎಂದು ಎಆ.ಅಂಬೇಡ್ಕರ ಅವರು ಹೇಳುತ್ತಾರೆ ಹಾಗಾದರೆ ಈ ಮಾರ್ಗ ಸಾಧ್ಯನಾ? ಅಸಾಧ್ಯವಾದ್ದು. ಡಾ.ಅಂಬೇಡ್ಕರವರ ಪ್ರಮುಖ ಕೃತಿಗಳಲ್ಲಿ ಅಸ್ಪøಶ್ಯರು ಒಂದು ಈ ಕೃತಿಯನ್ನು ಅಸ್ಪøಶ್ಯರಾಗಿ ಜನಿಸಿದ ಹಾಗು ತಮ್ಮ ವಯಕ್ತಿಕ ಶ್ರಧ್ಧಾಭಕ್ತಿ ಮತ್ತು ಸದ್ಗುಣಗಳಿಂದ ಸರ್ವರ ಗೌರವಕ್ಕೆ ಪಾತ್ರರಾದ ನಂದವೀರ, ರವಿದಾಸ ಮತ್ತು ಚೋಖಾವೇಳಾ ಇವರಿಗೆ ಪಣ್ಯ ಸ್ಮರಣೆಗಾಗಿ ಅರ್ಪಿಸುತ್ತಾರೆ.

ಈ ಕೃತಿಯಲ್ಲಿ ಡಾ.ಅಂಬೇಡ್ಕರವರು ತಮ್ಮ ಅಭಿಪ್ರಾಯವನ್ನು ಈ ರೀತಿ ವ್ಯಕ್ತಪಡಿಸುತ್ತಾರೆ. ಅಸ್ಪøಶರು ಊರ ಹೊರಗೆ ಏಕೆ ವಾಸಿಸುತ್ತಾರೆ? ಎಂಬ ಪ್ರಶ್ನೆಗೆ ಅಂಬೇಡ್ಕರರು ಉತ್ತರವನ್ನು ಹುಡುಕುತ್ತಾ ವಿಶ್ಲೇಷಿಸುತ್ತಾರೆ.ಅದೇ ರೀತಿ ಮನುಸ್ಮøತಿಯಲ್ಲಿ ವೃಕ್ಷಗೊಂಡಿರುವುದನ್ನು ಉಲ್ಲೇಖಿಸಿ ಮನು ಪ್ರಕಾರ ಅಂತ್ಯಜಜರು ಊರ ಹೊರಗೆ ವಾಸಿಸಬೇಕು. ಅವರ ಮನೆಗಳು ಊರ ಹೊರಗೆ ಇರತಕ್ಕದು ಮತ್ತು ಅವರನ್ನು ಅಪಾತ್ರರನ್ನಾಗಿ ಮಾಡಬೇಕು.ನಾಯಿ ಮತ್ತು ಕತ್ತೆ ಅವರ ಸಂಪತ್ತು ಆಗಬೇಕು. ಅವರ ಶವಕ್ಕೆ ತೊಡಸಿದ ಬಟ್ಟೆಯನ್ನು ತೊಡಬೇಕು. ಅವರ ಆಭರಣಗಳು ಕಬ್ಬಿಣದಿಂದ ಮಾಡಿದಂತವುಗಳೇ ಆಗಿರಬೇಕು ವ್ಯವಹಾರಕ್ಕೆ ಬಂದಾಗ ತಮ್ಮ ತಮ್ಮಲ್ಲಿ ನಡೆಯಬೇಕು. ಅಲೆಮಾರಿ ಜೀವನ ನಡೆಸಬೇಕು.

ಈ ಕಟ್ಟುನಿಟ್ಟಿನ ನಿಯಮಕ್ಕೆ ಬಾಬಾ ಸಾಹೇಬರು ಎರಡು ಪ್ರಶ್ನೆಗಳನ್ನು ಮುರಿದಿಡುತ್ತಾರೆ. ಮನುವಿನಶಾಸ್ತ್ರದ ಪ್ರಕಾರ ಅಸ್ಪøಶ್ಯರು ಊರ ಹೊರಗೆ ಮೊದಲಿನಿಂದಲೂ ಊರ ಹೊರಗೆ ಸ್ಥಳಾಂತರಿಸಲಾಯಿತೇ? ಎಂದು ಪ್ರಶ್ನೆ ಮಾಡುತ್ತಾರೆ.ಅಸ್ಪøಶ್ಯರ ಉಗಮ ಹೇಗಾಯಿತು ಎಂಬುದನ್ನು ಕರಿತು ಸಂಶೋಧನೆ ಮಾಡಿದ ಏಕೈಕ ಲೇಖಕರಾದ ಸ್ಟಾನ್ಲಿ ರೈಸ್ ಸಿಧ್ಧಾಂತವನ್ನು ಇಲ್ಲಿ ಅಂಬೇಡ್ಕರ ಅವರು ವಿಸ್ತಾರವಾಗಿ ಚರ್ಚಿಸುತ್ತಾರೆ. ಅಸ್ಪøಶ್ಯರ ಮೂಲ ನಿವಾಸಿಗಳಾಗಿದ್ದ ಅವರು ಆರ್ಯ ಮತ್ತು ದ್ರಾವಿಡರಿಂದ ಭಿನ್ನರಾಗಿದ್ದಾರೆ.ದ್ರಾವಿಡರಿಂದ ಅವರು ಸೋಲಿಸಲ್ಪಟ್ಟರು ಮತ್ತು ಪರಾಧೀನ ಮಾಡಲ್ಪಟ್ಟವರು. ಸ್ಟಾನ್ಲಿ ರೈಸರವರ ಪ್ರಕಾರ ಭಾರತದ ಮೇಲೆ ಎರದು ಆಕ್ರಮಣಗಳು ಜರುಗಿವೆ. ಭಾರತದ ಮೇಲೆ ದ್ರಾವಿಡರ ಆಕ್ರಮಣ ಅಸ್ಪøಶ್ಯರ ಪೂರ್ವಜರಾದ ಮೂಲ ನಿವಾಸಿಗಳನ್ನು ಅವರು ಜಯಿಸಿದರು ಹಾಗೂ ಅವರನ್ನು ಅಸ್ಪøಶ್ಯರಾಗಿ ಮಾಡಿದರು.

ಆರ್ಯರ ಆಕ್ರಮಣ: ದ್ರಾವಿಡರ ಮೇಲೆ ವಿಜಯ ಸಾಧಿಸಿದರು. ಅಂಬೇಡ್ಕರರು ಈ ಭಾರತದ ಮೇಲೆರೆಗಿ ಒಂದು ಮೂಲ ನಿವಾಸಿಗಳನ್ನು ಸೇರಿಸಿ ಅವರನ್ನು ಅಸ್ಪøಶ್ಯರನ್ನಾಗಿ ಮಾಡಿದ್ದಾರೆ. ಅಸ್ಪøರನ್ನು ಭಾರತೀಯ ಸಮಾಜದ ಮುಖ್ಯವಾಹಿನಿಗೆ ತರುವುದು : ಹೇಗೆ ಎಂದರೆ ಅಸ್ಪøಶ್ಯರನ್ನು ಕುರಿತಾದ ಕಾರ್ಯಕ್ರಮಗಳನ್ನು ಭಾರತೀಯ ಸಮಾಜ ಮುಖ್ಯವಾಹಿನಿಗೆ ತರುವುದರ ಮೇಲೆ ಕೇಂದ್ರೀಕೃತವಾಗಿದ್ದವು. ಅವರು ವರ್ಣದ ಸಮಾನ ಸ್ಥಾನಮಾನಕ್ಕಾಗಿ ಮಾತ್ರವಲ್ಲದೆ ಸಮಾಜಿಕ, ಆರ್ಥಿಕ, ರಾಜಕೀಯ, ಸಮಾನತೆ ಮತ್ತು ಎಲ್ಲರಿಗೂ ಸಮಾನ ಅವಕಾಶಕ್ಕಾಗಿ ಹೋರಾಡಿದರು. ಅಶ್ಪøಶ್ಯತೆಯನ್ನು ತೊಡೆದು ಹಾಕಲು ಮತ್ತು ದೀನದಲಿತ ಸಬಲೀಕರಣಕ್ಕಾಗಿ ಕಾಂಕ್ರೀಟ್ ಪ್ರಸ್ತಾಪಗಳನ್ನು ಸಮುಂದಿಡುತ್ತಾರೆ.

ಡಾ.ಅಂಬೇಡ್ಕರ ಭಾರತೀಯ ಸಂವಿಧಾನದಲ್ಲಿ ನಿರ್ಬಂಧನೆಗಳನ್ನು ಮಾಡುವ ಮೂಲಕ ವರ್ಗಗಳಿಗೆ ನ್ಯಾಯವನ್ನು ಕೋರಿದರು.

ಶಿವರಾಜ ದೊಡಮನಿ
ಕನ್ನಡ ಉಪನ್ಯಾಸಕರು
ಶ್ರೀ ಗುರು ರಾಘವೇಂದ್ರ ಪ್ರಥಮ ದರ್ಜೆ
ಮಹಾವಿದ್ಯಾಲಯ ವಿಜಯಪುರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ



Leave a Reply