ಸರ್ವ ಕವಯಿತ್ರಿ ,ಕವಿಮಿತ್ರರಿಗೂ ಹಾಗೂ ಶಿಕ್ಷಕರಿಗೂ
ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು
ವಿದ್ಯಾಲಯ ನಮ್ಮೆಲ್ಲರ ಜ್ಞಾನದ ಆಲಯವಿದು
ತಾಯಿ ಶಾರದೆ ವಿದ್ಯಾ ದೇವಿಗೆ ಕರವ ಮುಗಿದು
ಅಜ್ಞಾನದ ಅಂಧಕಾರದ ಕತ್ತಲೆಯ ಕಳೆಯಬೇಕು
ಸುಜ್ಞಾನದ ಬೆಳಕನು ಜಗಕೆಲ್ಲ ಪಸರಿಸಬೇಕು
ವಿದ್ಯಾ ಬುದ್ದಿಯ ಅರಿವನು ಮೂಡಿಸುವರು
ತಿದ್ದಿ ತೀಡಿ ವಿನಯ ಕಲಿಸುವ ಜ್ಞಾನದಾತರು
ಜ್ಞಾನವೆಂಬ ದೇಗುಲದಿ ಶಿಕ್ಷಣವ ಕಲಿಸುವರು
ಗುರುಗಳು ಸನ್ಮಾರ್ಗದ ಹಾದಿಯ ತೋರುವರು
ಅಆಇಈಉ ಯಿಂದ ಶುರುವಾಗುವ ಪಾಠವು
ಸಾಹಿತ್ಯ-ಕಲೆ ವಿಜ್ಞಾನ ವಿಷಯಗಳ ಭಂಡಾರವು
ವಿದ್ಯಾರ್ಥಿಗಳಿಗೆ ಶಿಸ್ತು ಪಾಠ ಕಲಿಸುವ ಶಿಕ್ಷಕರು
ಸಂಗೀತ -ನೃತ್ಯ ನಾಟಕ ಕಲಿಸಿ ಪ್ರೋತ್ಸಾಹಿಸುವರು
ಗುರುಗಳಿಗೆ ವಂದಿಸುತ ಗೌರವ ಕೊಡಬೇಕು
ಜ್ಞಾನ ದಾತರಿಗೆ ಶರಣು ಶರಣು ಎನ್ನಬೇಕು
ಶಿಕ್ಷಕರನ್ನು ಅಭಿನಂದಿಸಿ ಸನ್ಮಾನ ಮಾಡಬೇಕು
ಶಿಕ್ಷಣವೆಂಬ ಜ್ಞಾನದ ಜ್ಯೋತಿಯ ಹಚ್ಚಬೇಕು
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ