ನಿನ್ನ ಕಣ್ಣಾಲಿಗಳನು ನೋಡಿ
ಮುದ್ದಿಸದೆ ಅದೆಷ್ಟು ದಿನಗಳದಾವು
ನನ್ನ ಕಂಡೊಡನೆ ತುಟಿಗಳು
ಬಿಗಿಯುತ್ತಾ ಕೆನ್ನೆಯ ತೋರಿಸುತ್ತಿದ್ದೆ
ಮುತ್ತಿಟ್ಟು ಬಾಚಿ ತಬ್ಬಲು
ಹವಣಿಸುತ್ತಿದ್ದೆ ಆಗ ನಿನ್ನ
ಕಂಗಳ ಬಿಸಿಯ ಹನಿಗಳು
ನನ್ನ ಎದೆಯ ಮೇಲೆ ಜಲಪಾತದಂತೆ
ಹರಿಯುತ್ತಿದ್ದವು
ಮತ್ತೆ ಮತ್ತೆ ಆಲಂಗಿಸಿ
ಮುತ್ತಿನ ಮಳೆ ಸುರಿಸುತ್ತಿದ್ದೆ
ಎಲ್ಲಿವೆ ಆ ದಿನಗಳು
ಮೌನಿಯಾಗಿರುವೆ ನೀನಿಲ್ಲದೆ
ಬಂದು ಸೇರಬಾರದೆ ಕಾದಿರುವೆ ನಿನಗಾಗಿ
ಮನಸೆಲ್ಲಾ ನೀನೆ ತುಂಬಿರುವಾಗ
ಬಿಟ್ಟು ಬಿಡದೆ ಕಾಡಿದೆ
ಪ್ರಿಯ ಸಖಿಯ ಸವಿನೆನಪುಗಳ ಹೂರಣ
ಒಟ್ಟಾಗಿ ರಸದೌತಣ ಸವಿಯಲು
ಸೇರೋಣ ಮತ್ತೊಮ್ಮೆ ಮಗದೊಮ್ಮೆ
ಕಂಸ
ಕಂಚುಗಾರನಹಳ್ಳಿ ಸತೀಶ್
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ