ಮಕ್ಕಳ ಮಮತೆ
₹150.00
Author : ಗುರುಸ್ವಾಮಿ ಗಣಾಚಾರಿ
Publishers Name : ವೀರೇಶ ಪ್ರಕಾಶನ
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಗುರುಸ್ವಾಮಿ ಗಣಾಚಾರಿ ಅವರು ೧೦-೦೨-೧೯೪೪ ರಂದು ಜನಿಸಿದರು. ಇವರು ಬಾಗಲಕೋಟೆ ಜಿಲ್ಲೆಯ ಚಿಕ್ಕ ಹೊದ್ದೂರ ಗ್ರಾಮದವರು. ಎಂ.ಎ. ಬಿ.ಎಡ್. ಪದವೀಧರರು. ಅಲ್ಲದೆ ಸಂಗೀತ ವಿದ್ವಾನ್, ಸಂಗೀತ ವಿಶಾರದ, ಆಯುರ್ವೇದ ವೈದ್ಯ ವಿಶಾರದ ಪದವಿ ಪಡೆದಿದ್ದಾರೆ. ತಂದೆ ಗಂಗಯ್ಯ, ತಾಯಿ ಗೌರಮ್ಮ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿ, ಪ್ರೌಢಶಾಲಾ ಶಿಕ್ಷಕರಾಗಿ ಪದನೋನ್ನತಿ ಹೊಂದಿ ಒಟ್ಟು ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಬಾಗಲಕೋಟೆಯ ಮುಚಖಂಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯ ಸೇವೆಗಾಗಿ ರಾಜ್ಯ (೧೯೮೯) ಮತ್ತು ರಾಷ್ಟ್ರ ಪ್ರಶಸ್ತಿ (೧೯೯೨) ಪುರಸ್ಕೃತರು.
ಗುರುಸ್ವಾಮಿ ಗಣಾಚಾರಿಯವರು ಇದುವರೆಗೆ ಒಟ್ಟು ೭೦ ಕೃತಿಗಳನ್ನು ರಚಿಸುವ ಮೂಲಕ ಪ್ರಮುಖ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಾರೆ. ಭಕ್ತಿಗೀತೆ, ಭಾವಗೀತೆ, ಜಾನಪದ, ತ್ರಿಪದಿ, ವಚನ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ಪ್ರವಾಸ ಕಥನ ಮತ್ತು ನಾಟಕ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯಕೃಷಿ ಗೈದಿದ್ದಾರೆ.
ಪ್ರಸ್ತುತ ಕಥಾ ಸಂಕಲನದಲ್ಲಿ ೩೪ ಕಥೆಗಳಿವೆ. ಮಕ್ಕಳ ಮಟ್ಟಕ್ಕೆ ತಕ್ಕಂತೆ ಸರಳ ಭಾಷೆ, ಶೈಲಿ, ನಿರೂಪಣೆ ಹೊಂದಿವೆ. ಈ ಕಥೆಗಳ ಪ್ರಸಂಗಗಳು ರಸವತ್ತಾಗಿವೆ. ಮಕ್ಕಳಂತೆ ಪ್ರೌಢ ಓದುಗರಿಗೂ ರಂಜಿಸುತ್ತವೆ. ಗಣಾಚಾರಿಯವರಿಂದ ಇಂತಹ ಮೌಲ್ಯಯುತ ಕೃತಿಗಳು ಬರಲೆಂದು ಹಾರೈಸುವೆ.
ಡಾ. ಮೈನುದ್ದೀನ ರೇವಡಿಗಾರ




Reviews
There are no reviews yet.