ವೈಶಾಖಮಾಸದ ಹುಣ್ಣಿಮೆಯಂದು ಜನಿಸಿದವರು
ಶುಧ್ಧೋದನ ಮತ್ತು ಮಾಯಾದೇವಿಯ ಸುಪುತ್ರರು
ಶಿಶುವಾಗಿದ್ದಾಗಲೇ ಹೆತ್ತಮ್ಮನ ಕಳೆದು ಕೊಂಡವರು
ಮಲತಾಯಿ ಪ್ರಜಾಪತಿದೇವಿ ಆರೈಕೆಯಲ್ಲಿ ಬೆಳೆದವರು
ಸಿದ್ದಾರ್ಥ ಗೌತಮ ಬುದ್ಧನೆಂಬ ನಾಮಧೇಯದವರು
ಸಾಂಸಾರಿಕ ಬಂಧನದಿಂದ ಮುಕ್ತಿಯ ಬಯಸಿದವರು
ಸುಖ ಭೋಗಗಳ ಐಷಾರಾಮಿ ಜೀವನ ತ್ಯಜಿಸಿದವರು
ತಪಸ್ಸು ಯೋಗ ಧ್ಯಾನ ಸಿದ್ಧಿಗಾಗಿ ಕಾಡಿಗೆ ತೆರಳಿದವರು
ಅಜ್ಞಾನದ ಅಂಧಕಾರದ ಸಮಾಜದ ಕಣ್ತೆರೆಸಿದವರು
ಜಾತಿ ತಾರತಮ್ಯ ಮೂಢನಂಬಿಕೆಯ ಖಂಡಿಸಿದವರು
ಜ್ಞಾನ ಮುಕ್ತಿಯ ಮಾರ್ಗದರ್ಶನವ ಭೋದಿಸಿದವರು
ಸತ್ಯ ಸುಖ ಶಾಂತಿ ಮೋಕ್ಷದ ಹಾದಿಯ ತೋರಿದವರು
ಸಾವಿಲ್ಲದ ಮನೆಯಿಂದ ಸಾಸಿವೆಕಾಳು ತನ್ನಿ ಎಂದವರು
ಭೋಧಿವೃಕ್ಷದಡಿ ಕುಳಿತು ಕಠಿಣ ತಪಸ್ಸು ಆಚರಿಸಿದರು
ಸಾರನಾಥದಲ್ಲಿ ಧರ್ಮಚಕ್ರ ಸ್ಥಾಪಿಸಿ ಉಪದೇಶಿಸಿದರು
ಗೌತಮಬುದ್ಧ ಬೌಧ್ದ ಧರ್ಮದ ಸಂಸ್ಥಾಪಕರಿವರು
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಕವನ ಸಂಕಲನ (Poetry Collection)
ಮಧುರ ಮೋಹನ
- Original price was: ₹120.00.₹110.00Current price is: ₹110.00.
-
- Add to basket
- ಇತರೆ (Others)
ಅವಲೋಕನ
- ₹150.00