You are currently viewing ನೆಲದ ನೋವು

ನೆಲದ ನೋವು

ಕವನ ಸಂಕಲನಕ್ಕೆ ಬಸವರಾಜ ಕಲೆಗಾರರು ಮುನ್ನುಡಿ ಬರೆದು, ಡಾ.ಎ.ಎಲ್. ದೇಸಾಯಿಯವರು ಬೆನ್ನುಡಿ ಮತ್ತು ರಾಘವೇಂದ್ರ ರಾಜಕುಮಾರ್ ಶುಭಾಶಯದೊಂದಿಗೆ ಲೋಕಾರ್ಪಣೆಗೊಂಡಿರುವ ಕೃತಿ ಹೊತ್ತಿನ ಚೀಲ ತುಂಬಿಸಿಕೊಂಡು ಬದುಕ ತೆಯ್ದದವರ ಬಡಿವಾರದ ಬದುಕಿನ ಕಂತುಗಳ ಬಗ್ಗೆ ಬಹಳಷ್ಟು ಮಾತನಾಡುತ್ತದೆ.ವಿಜ್ಞಾನ ತಂತ್ರಜ್ಞಾನ ಇತಿಹಾಸ ಅರ್ಥಶಾಸ್ತ್ರ ಹೀಗೆ ಎಲ್ಲ ಭಾಗಗಳಿಂದಲೂ ದ್ವಂದ್ವ ಮುಖವಾಗಿ ಪದ್ಯ ಅನುಭವಿಸಲು ಅವ್ವ ಮತ್ತು ತಂತ್ರಜ್ಞಾನ ಸಿಗುತ್ತದೆ. ಸಿದ್ದಣ್ಣ ಪೂಜಾರಿ ಅವರ ಈ ಕವನ ಸಂಕಲನ ನೆಲ ಮೂಲ ಸಂಸ್ಕೃತಿಯನ್ನು ಆವರಿಸಿಕೊಂಡು ಬಡತನ,ನಿರುದ್ಯೋಗ,ಮನದ ವ್ಯಾಜ್ಯ,ರಾಷ್ಟ್ರಧ್ವಜ,ರಾಷ್ಟ್ರಪ್ರೇಮ ಸಹಜವಾಗಿ ಉತ್ಪತ್ತಿಯಾಗುವ ಮನದನ್ನೆಯ ನೆನಪು, ತಾಯಿಯ ಶ್ರೇಷ್ಠತೆ,ಬದುಕು ಒಂದು ಅನ್ವೇಷಣೆ ಮಾತು ಕಟ್ಟುವಿಕೆ, ಅಲ್ಲಲ್ಲಿ ಕಂಡು ಬರುವ ಅಕ್ಷರದವ್ವನ ನೆನಪು, ಅದೋ ರಾತ್ರಿ ಬೆಳೆದು ನಿಂತ ದೊಡ್ಡ ಪಟ್ಟಣಗಳಲ್ಲಿ ನಾಚಿಕೆಯಾಗುವಂತಹ ಡಿಜಿಟಲೀಕರಣದ ಮಾನವೀಯ ಮೌಲ್ಯಗಳ ಕುಂದುವಿಕೆ ಹೀಗೆ ಜಗತ್ತಿನ ನಾನಾ ಮೂಲೆಗಳನ್ನು ಸುತ್ತಿ ಬಂದರೂ ಸಹಿತ ಮಾಯವಾಗುತ್ತಿರುವ ನೀತಿ,ಸಮಾನತೆ,ಸಹಕಾರ, ಮಾನವ ಬಂದತ್ವ ಹೀಗೆ ಪರ್ಯಾಯ ಮಾರ್ಗಗಳನ್ನ ಹುಡುಕುತ್ತಾ ಹೋದಂತೆಲ್ಲಾ ಮಾಯವಾದ ಎಲ್ಲ ವಿಚಾರಗಳ ಮೇಲೆ ಬೆಳಕು ತರುವ ಪ್ರಯತ್ನ ಈ ಕವನ ಸಂಕಲನ ಮಾಡಿದೆ ಎಂದು ಹೇಳಬಹುದು.

‘ಉಚ್ಚ ವಿಚಾರ ದೇಶ ಸಂಸ್ಕಾರ’ ಎನ್ನುವ ಪ್ರಾಚೀನ ನಾನ್ನುಡಿಯಂತೆ ಸಂಸ್ಕಾರಯುತ ದೇಶವನ್ನ ಕಟ್ಟಬೇಕಾದರೆ ಉಚ್ಛವಾದ ವಿಚಾರಗಳು ಮಾನವನಲ್ಲಿ ಸದಾ ಹರಿದಾಡುತ್ತಿರಬೇಕು ಮತ್ತು ಮನುಷ್ಯನ ನಡುವೆ ಬೆಸೆಯುತ್ತಿರಬೇಕು ಎನ್ನುವ ಕಲ್ಪನೆಯ ಇಡಿಯಾಗಿ ಕವನ ಸಂಕಲನ ಮಾತನಾಡುತ್ತಾ ಹೋಗುತ್ತದೆ. ಮಾನವ ಸಹಜ ಗುಣಗಳಾದ ದ್ವೇಷ -ಅಸೂಹೆ-ಮತ್ಸರ ಕಿತ್ತೆಸೆದು ಸ್ವಾತಂತ್ರ್ಯ- ಸಮಾನತೆ-ಭಾತೃತ್ವ, ಸಹಕಾರ-ಸಹೋದರತ್ವ ಸಧರ್ಮ ಗೌರವ-ಅನ್ಯಧರ್ಮದ ಪ್ರೇಮ ಹೀಗೆ ನಾವೆಲ್ಲ -ಭಾರತೀಯರೆಂಬ ಭಾವ ಮೂಡಲಿ ನಮ್ಮಲ್ಲಿ ಭೇದ-ಭಾವ ಪ್ರಭು ದೂರ ಮಾಡಲಿ’ಎನ್ನುವ ಕವಿತೆಯ ಸಾಲುಗಳನ್ನು ನೆನೆಸುವಂತೆ ಸಿದ್ದಪ್ಪ ಪೂಜಾರಿ ಅವರು ನೆನೆಕೆಯಲ್ಲಿಯೇ ಸರ್ವಧರ್ಮ ಸಮಾನತೆಯ ಮಾತುಗಳನ್ನು ಮೇಲುಪಂಥಿಗೆ ತರುವ ಪ್ರಯತ್ನ ಮಾಡಿದ್ದಾರೆ.ನನ್ನ ದೇಶಾಭಿಮಾನ, ಯಾರು ಯಾಕೆ ಜೈ ಎಂದರು-! ಈ ನೆಲ ಒಪ್ಪುವುದಿಲ್ಲ,ಎಲ್ಲರೂ ಸಮಾನರೇ,ರಾಷ್ಟ್ರ ಧ್ವಜ ಹಾರಿಸುತ್ತೇವೆ, ನನ್ನ ಹಲಗಿ,ನನ್ನ ಒಪ್ಪಿಕೊಳ್ಳಿ,ಯಾರನ್ನಾದರೂ ವಿರೋಧಿಸ, ಪ್ರೀತಿ ಎಂದರೆ, ನಾಳೆಯ ಭರವಸೆ, ಧ್ವನಿ ಇಲ್ಲದವರು,ನಾನೇಕೆ ಬರೆಯುತ್ತೇನೆ ಎನ್ನುವ ಕವಿತೆಗಳಲ್ಲಿ ಸಹಜ ಸಂಸ್ಕೃತಿಯನ್ನು ಭಾರತೀಯತೆಯ ಮೂಲವನ್ನು ಬಯಲಿಗೆಳೆಯೂವ ಪ್ರಯತ್ನದ ವಾರಸುದಾರರಾಗಿ ಕಾಣಿಸಿಕೊಳ್ಳುತ್ತಾರೆ.




ಕವನ ಸಂಕಲನ ಯಾರ ಪರವಾಗಿಯೂ ಮಾತನಾಡದೆ ಯಾವುದರ ಮುತುವರ್ಜಿಯನ್ನು ವಹಿಸಿಕೊಳ್ಳದೆ ಸಹಜವಾಗಿ ಹುಟ್ಟಿರುವ ಭಾವನೆಗಳಿಗೆ ಸಹಜ ರೀತಿಯಲ್ಲಿಯೇ ಪ್ರತಿಕ್ರಿಸುತ್ತಾ ಬಂದಿರುವುದು ಅವರ ಸಹಜಭಾಷೆಯ,ಸಹ ಸಂಸ್ಕೃತಿಯ ಸಲಹುವಿಕೆ ಎದ್ದು ಕಾಣುತ್ತದೆ, ಮಾತ್ರವಲ್ಲ ಭಾರತೀಯತೆಯ ಒಲವು ಸರ್ವಧರ್ಮದ ಚೆಲುವುಗಳಿಗೆ ಕಾರಣವಾಗಿದೆ ಎಂದು ಇಲ್ಲಿ ದಾಖಲಿಸಿಕೊಳ್ಳಬಹುದು. ಭಾಷೆ ಸೊಗಡು ಗ್ರಾಂಥಿಕವಾಗಿ ಕಾಣಿಸಿಕೊಂಡರು ತಾಯಿ ಬಗ್ಗೆ ಮಾತನಾಡುವಾಗ, ತಮ್ಮನ ಬಗ್ಗೆ ಮಾತನಾಡುವಾಗ, ಸಮಾಜದ ಬಗ್ಗೆ ಮಾತನಾಡುವಾಗ,ಸಹ ಧರ್ಮದ ಬಗ್ಗೆ ಮಾತನಾಡುವಾಗ, ಸಹಜ ಸೊಗಡನ್ನು ಎತ್ತಿಕೊಂಡು ಬಂದಿದೆ ಎಂದು ಹೇಳಲು ಅತೀಶಯವೇನು ಅನಿಸುವುದಿಲ್ಲ.ಅಲ್ಲಲ್ಲಿ ಎದ್ದು ಕಾಣುವ ನಿಜ ಶಬ್ದಗಳು ಗ್ರಂಥ ಮೂಲದ ಕೊರತೆ ಮತ್ತು ಭಾಷೆಯ ಕಟ್ಟುವಿಕೆಯಲ್ಲಿ ಕಂಡುಬಂದಿರುವ ಕೊರತೆಗಳ ವಿನಹಃ ಅವು ಸಂಕಲನದ ಅಂತಿಮ ಚಹರೆಗಳಲ್ಲಾ. ಕವಿಯ ಗೊಂದಲಗಳು ಮುಂದಿನ ಓದುಗಳಲ್ಲಿ ಬದಲಾಗಬಹುದು ಎಂದು ನಾವು ಭಾವಿಸಿಕೊಳ್ಳಬೇಕಾಗುತ್ತದೆ. ಕವಿಯಾದವನು ಶಬ್ದಗಳನ್ನ ಮುರಿದು ಕಟ್ಟುವ ಮತ್ತು ಸಹಜಕ್ಕೆ ಬಗ್ಗದ ಕುಗ್ಗದ ಪಗ್ಗದ ಸಗ್ಗಗಳನ್ನು ಬಳಸಿಕೊಂಡಾಗ ಸುಖದ ಉತ್ತುಂಗವನ್ನು ಇರಬಹುದು. ಸಮಾಜ ಹೇಳದೆ ಉಳಿದಿರುವ ಕೆಲವು ವಿಚಾರಗಳನ್ನ ವಾಕ್ಯ-ಪದ-ಶಬ್ದಗಳಲ್ಲಿ ವ್ಯಕ್ತಪಡಿಸಬಹುದು. ಇದು ಶ್ರೇಷ್ಠ ಮಟ್ಟದ ಓದಿನಿಂದ ಮಹೋನ್ನತ ಕವಿಭಾವದಿಂದ ಮತ್ತು ಕವಿ ಸಮಯದಲ್ಲಿ ಉತ್ಪತ್ತಿಯಾಗಿರುವ ಸಹಜ ಕವಿತೆಗಳಿಂದ ಊಹಿಸಲು ಸಾಧ್ಯಇದನ್ನು ಗ್ರಹಿಸಿಕೊಂಡಾಗ ಮಾತ್ರ ಕವಿಯಾದವನು ಜನ-ಸಹೃದಯ ಊಹೆ ಮಾಡದೇ ಇರುವ ವಿಚಾರಗಳನ್ನ ದಾಖಲಿಸಿ, ಸಹೃದಯದಿಂದ ಭೇಷ್ ಎನಿಸಿಕೊಳ್ಳಬಹುದು.ಅದನ್ನ ಸಿದ್ದಪ್ಪನವರು ಕಲಿಯಬೇಕಾದ ಅರಿಯಬೇಕಾದ ಸೂಕ್ಷ್ಮ ಸಂವೇದನೆ ಎಂದು ನಾವು ಹೇಳಬೇಕಾಗುತ್ತದೆ. ಒಟ್ಟು ಕವಿತೆಯ ಕವನ ಸಂಕಲನದ ಸಾರವೇನೆಂದರೆ ತಾನು ಅರಗಿಸಿಕೊಂಡಿರುವ ಸಮಾಜದ ದ್ವೀತ್ವಗಳು-ವಿಪ್ರಗಳು ಸ್ವಪ್ನದ ರೂಪದಲ್ಲಿ ಬಂದಿರುವ ವಿಚಿತ್ರಗಳನ್ನ ಜನರತ್ತ ಹರಿಬಿಟ್ಟು, ಅವರ ಅಭಿಪ್ರಾಯಗಳಿಗೆ ವಿಶೇಷವಾದ ಮನ್ನಣೆ ಕೊಟ್ಟು ಭಾವಿ ಕವಿತೆ ಕಾವ್ಯ ಕಥೆ ಕಾದಂಬರಿಗೆ ಹೊಸ ರೂಪಗಳನ್ನು ಕಲ್ಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ‘ನೆಲದ ನೋವು’ ಕವನ ಸಂಕಲನ ಜನರಿಗೆ ಅರ್ಪಿಸಿದ್ದಾರೆಎಂದುಭಾವಿಸಿಕೊಳ್ಳಬೇಕಿದೆ.ಅಷ್ಟೇ ಅಲ್ಲ ಭಾವತೀತವಾದ ಹೊಸ ಜಗತ್ತನ್ನ ಪ್ರವೇಶಿಸುತ್ತಿರುವ ಸಿದ್ದಪ್ಪನವರಿಗೆ ಹಳೆಯ ತಲೆಮಾರಿನ ಕವಿಗಳು ಸೂಕ್ತವಾದ ಮಾರ್ಗದರ್ಶನವಿತ್ತು ಸಹಕರಿಸಿ ಮುಂಬರುವ ಕವಿತೆಗಳಿಗೆ ದರ್ಶಕ-ರೂಪಕ ಮತ್ತು ಮಾರ್ಗದರ್ಶಕರಾಗಿ ಕಾಣಿಸಿಕೊಳ್ಳಬೇಕಾಗಿದೆ. ಇದು ಗ್ರಹಿಸುವ ಜರೂರತ್ತು ಈ ಕವನದ ರೂವಾರಿಗಳದ್ದಾಗಿದೆ ಎಂದಿಲ್ಲಿ ಹೇಳಬಹುದು. ಈ ನೆಲದ ನೋವು ಇನ್ನಷ್ಟು ಮಾತನಾಡಲಿ ಭೇಧ ಭಾವ ತೆಗೆದುಹಾಕಿ,ಸಮಾನತೆಯ ಬಿತ್ತಿ ಹೋಗಲಿ ಬೆಳೆ-ಬೆಲೆ ಸಮೃದ್ಧವಾಗಲಿ ಎಂದು ಹಾರೈಸುತ್ತೇನೆ.

ಮೈಬೂಬಸಾಹೇಬ. ವೈ.ಜೆ.
ವಿಜಯಪೂರ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.




This Post Has One Comment

  1. Maiboobsaheb. Y.

    ಹೊತ್ತಿಗೆ ಅವಲೋಕನ ಪ್ರಕಟಿಸಿದ ಕನ್ನಡ ಬುಕ್ ಪ್ಯಾಲೆಸ್ ಸಂಪಾದಕ ಮಂಡಳಿಗೆ ಅನಂತ ಧನ್ಯವಾದಗಳು ಅರ್ಪಿಸುತ್ತಾ ಇಂತಹ ಸಾಕಷ್ಟು ಕೃತಿಗಳ ಪರಿಚಯ ಯುವಜನಕ್ಕೆ ಮಾಡುವುದು ಇಂದಿನ ಬಹುದೊಡ್ಡ ಜವಾಬ್ದಾರಿ ಅಂತಹ ಜವಾಬ್ದಾರಿಯನ್ನ ಬಹು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಕನ್ನಡ ಪುಸ್ತಕ ಪ್ಯಾಲೇಸ್ ಅನಂತಕಾಲ ಬದುಕಿ ಬಾಳಲಿ ಎಂದು ಆಶಿಸುತ್ತೇನೆ.

Comments are closed.