You are currently viewing ಗಾಂಧಿ ನೀವು ಇರಬೇಕಿತ್ತು

ಗಾಂಧಿ ನೀವು ಇರಬೇಕಿತ್ತು

ಗಾಂಧಿ ನೀವು ಇರಬೇಕಿತ್ತು
ಸತ್ಯ, ಅಹಿಂಸೆಯ ತತ್ವಗಳನ್ನು ಬೋಧಿಸಲು
ಧರ್ಮ ಧರ್ಮಗಳ ಮಧ್ಯೆ
ಹೊತ್ತಿ ಉರಿಯುತ್ತಿರುವ ಬೆಂಕಿಯನ್ನು ಆರಿಸಲು.

ಗಾಂಧಿ ನೀವು ಇರಬೇಕಿತ್ತು
ರಾಮ ರಾಜ್ಯವನ್ನು ಕಟ್ಟಲು
ಅನ್ಯಾಯ, ಅತ್ಯಾಚಾರಿಗಳನ್ನು ತೊಡೆದು
ನಿಮ್ಮ ಕನಸಿನ ಸದೃಢ ಭಾರತವನ್ನು ಕಟ್ಟಲು.

ಗಾಂಧಿ ನೀವು ಇರಬೇಕಿತ್ತು
ಸಮಾಜದ ಓರೆ ಕೋರೆಗಳನ್ನು ತಿದ್ದಿಲು
ಅಜ್ಞಾನ, ಅಂಧಕಾರವ ಅಳಿದು
ಸಮೃದ್ಧವಾದ ದೇಶವನ್ನು ಕಟ್ಟಲು.

ಗಾಂಧಿ ನೀವು ಇರಬೇಕಿತ್ತು
ಅಸಮಾನತೆಯನ್ನು ಅಳಿಯಲು
ಒಂದೊತ್ತಿನ ಊಟಕ್ಕೆ ಪರದಾಡುತ್ತಿರುವ
ದೀನ, ದಲಿತ, ದುರ್ಬಲರ ಬದುಕ ಬೆಳಗಲು.

ಗಾಂಧಿ ಖರೇನ ನೀವು ಇರಬೇಕಿತ್ತು
ಶಾಂತಿಯ ಮಂತ್ರ ಪಠಿಸಲು
ಸತ್ಯವೇ ದೇವರೆಂದು ತಿಳಿದು
ಭಕ್ತಿಯಿಂದ ಪ್ರೀತಿಯನ್ನು ಹಂಚಲು.

-ಹುಸೇನಸಾಬ ವಣಗೇರಿ
ಸಂಶೋಧನಾ ವಿದ್ಯಾರ್ಥಿ,
ಸಮಾಜ ಕಾರ್ಯ ವಿಭಾಗ,
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.