You are currently viewing ಅಸಮಾನತೆ ಅಳಿಸುವ ಸ್ವಾಭಿಮಾನ ಕಟ್ಟುವ

ಅಸಮಾನತೆ ಅಳಿಸುವ ಸ್ವಾಭಿಮಾನ ಕಟ್ಟುವ

ನಮ್ಮ ದೇಶ ಭಾರತ ನಾವು ಭಾರತೀಯರೆನ್ನುವ
ನಾವೆಲ್ಲರು ಭಾರತಾಂಬೆಯ ಮಡಿಲ ಮಕ್ಕಳೆನ್ನುವ
ನಾವೆಲ್ಲ ಭಾರತದ ಸತ್ಪ್ರಜೆಯೆಂದು ಹೆಮ್ಮೆಪಡುವ
ನಮ್ಮ ಭಾರತ ಸ್ವತಂತ್ರ ದೇಶವೆಂದು ಹರುಷಿಸುವ

ಜಾತಿ ಧರ್ಮ ರಾಜ್ಯ ಭಾಷೆಗಿಂತ ದೇಶ ದೊಡ್ಡದೆನ್ನುವ
ಜಾತಿ-ಮತ ಭೇಧ-ಭಾವ ದ್ವೇಷವನ್ನು ಮಾಡದಿರುವ
ದೇಶ ಸೇವೆಯೇ ಈಶ ಸೇವೆಯೆನ್ನುತ ದುಡಿಯುವ
ದೇಶಪ್ರೇಮ ಮಾತೃಭೂಮಿಯ ರಕ್ಷಣೆಗೆ ಪಣತೊಡುವ

ನಮ್ಮ ದೇಶದ ಸೈನಿಕರ ನಮ್ಮ ರಕ್ಷಕರ ಗೌರವಿಸುವ
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಸ್ಮರಿಸುವ
ನಮ್ಮ ದೇಶ ಭಾರತ ಯೋಧರ ಭರತಭೂಮಿಯೆನ್ನುವ
ದೇಶದ ಗಡಿಯ ಕಾಯುವ ಯೋಧರಿಗೆ ನಮಿಸುವ

ಬಡವ ಬಲ್ಲಿದ ಮೇಲುಕೀಳೆಂಬ ಭಾವನೆ ತೊಡೆಯುವ
ಅಸಮಾನತೆಯ ಅಳಿಸುವ ಸ್ವಾಭಿಮಾನ ಕಟ್ಟುವ
ನಮ್ಮ ದೇಶದ ಸಂವಿಧಾನಕ್ಕೆ ಗೌರವಿಸಿ ತಲೆಬಾಗುವ
ಸರ್ವರೂ ಸಮಾನರೆಂಬ ಸ್ಥಿತಿ ನಿರ್ಮಾಣ ಮಾಡುವ

ಆಗಸ್ಟ್ ಹದಿನೈದರಂದು ಸ್ವಾತಂತ್ರ್ಯ ದಿನವ ಆಚರಿಸುವ
ಕೇಸರಿ ಬಿಳಿ ಹಸಿರು ಬಣ್ಣದ ತ್ರಿವರ್ಣ ಧ್ವಜ ಹಾರಿಸುವ
ಶಾಂತಿ ಸಂದೇಶ ತಾಳ್ಮೆಯ ಮನೋಭಾವ ಬೆಳೆಸುವ
ಒಕ್ಕೊರಲಿನಿಂದ ಜೈ ಹಿಂದ್ ವಂದೇ ಮಾತರಂ ಎನ್ನುವ

ಧನ್ಯವಾದ

ಪೂರ್ಣಿಮಾ ರಾಜೇಶ್
ಕವಯತ್ರಿ ಹವ್ಯಾಸಿ ಬರಹಗಾರ್ತಿ
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.