ನೀ ತೋರಿದ ಹಾದಿಯಲಿ ನಡೆದೆ
ನೀ ನೀಡಿದ ಮತಿಯಲೇ ಬೆಳೆದೆ
ನಿನ್ನೆಲ್ಲಾ ಶ್ರಮವನು ನನಗೆ ಸುರಿದೆ
ಅದರಿಂದಲೇ ಇಂದು ನಾ ನಾನಾದೆ
ನಿನ್ನ ಮಡಿಲಿನ ಕೂಸು ನಾನಾಗಿ
ನೀನೆ ನನಗೆ ಮೊದಲ ಗುರುವಾಗಿ
ಪಾಠಗಳನು ಕಲಿಸಿದ ಮಹಾ ಗುರು
ಅದರಿಂದ ನಾನೇರಿದೆ ಈ ಬಾಳತೇರು
ಒಳಿತು ಕೆಡುಕುಗಳ ಎದುರಿಸುವ ಶಕ್ತಿ
ನನ್ನ ಬದುಕಲಿ ಅಳವಡಿಸಿದೆ ಯುಕ್ತಿ
ತಾಯಿ ದೇವರಿಗಿಂತ ಬೇರೆ ದೈವವಿಲ್ಲ
ನನ್ನೀ ಬಾಳಿನೊಳು ನಿನ್ನದೇ ಪಾತ್ರವೆಲ್ಲ
ನಿನ್ನಿಂದಲೇ ಎಲ್ಲ ನೀನಿಲ್ಲದೆ ಬೇರೇನಿಲ್ಲ
ಕಾರಣವು ನೀನೆ ಗುರುತರ ಗುರಿಗಳಿಗೆಲ್ಲ
ನಿನ್ನ ಮಮತೆಯ ಕಾಳಜಿಗೆ ಸೋತೆನು
ನಿನ್ನ ಸಮಾನರಾರಿಹರು ಹೇಳು ನೀನು
ನಳಿನಾ ದ್ವಾರಕನಾಥ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.