1.ನಿನ್ನ ಕನಸುಗಳ ಗುಹೆ ಹೊಕ್ಕು
ತಡಕಾಡಲು ಬಿಡು
ಕದ್ದ ನನ್ನ ನಿದ್ದೆಯ ಹಿಂದೆ
ನಿನ್ನ ಕೈವಾಡದ ಶಂಕೆ ನನಗೆ
2.ಬಾ ಏನೋ ಮಾತಾಡೋಣ
ನಾನಿಲ್ಲಿ — ನೀ ಅಲ್ಲಿ
ನೋಡದೆ ಕೇಳದೆ ತುಟಿ ತೆರೆಯದೆ
ಒಂದು ಏಕಾಂತದ
ಭಾವಕೋಶಕ್ಕೆ ಪಯಣಿಸೋಣ
3.ಯಾರೋ ಬೇಡಿಕೊಂಡ ಆಶೀರ್ವಾದದಲಿ
ಮರೆತುಬಿಟ್ಟರು ನನ್ನ
ಈಗ ದೇವರ ಮನಾಯಿ ಇದೆ
ಬೇರೆಯವರಿಗಾಗಲು ನನ್ನ
4.ಬೆಚ್ಚಗೆ ಕಾಪಿಟ್ಟುಕೊಂಡೆ
ನನ್ನ ಪ್ರೀತಿ -ಜೀವನ ಪೂರ್ತಿ
ಮುಸ್ಸಂಜೆ ಕ್ಷಣ
ಕುಣಿಯಲು ಕಲಿಸಬೇಕೆ ಆ ಪ್ರೀತಿ.
5.ನಡೆಯುತ್ತೇವೆ ನಾವಿಬ್ಬರೂ
ಜೊತೆ ಜೊತೆಯಲಿ
ಕಂಡ ಜನ
ನನ್ನ ಉಡಾಳನೆಂದರೆ
ಆಕೆಗೆ ಚಂದಿರ ಅನ್ನುತ್ತಾರೆ.
6.ಬೀಸಿ ಒಗೆದ ಜನರ ಕಲ್ಲುಗಳು
ನನ್ನ ಗಾಯಗೊಳಿಸಿತು
ನನ್ನ ಹೃದಯಕೆ ಬಡಿದ
ಕಲ್ಲು ಮಾತ್ರ
ನಮ್ಮವರದೇ ಆಗಿತ್ತು.
7.ನೋವಿನ ಹೆಣಿಗೆಯ
ಕೈಚಳಕ ಎಂಥದು ನೋಡಿ ಸ್ವಾಮಿ-
ಒಂದು ನೂಲಕೆ ಕೆಣಕಿದ ಕ್ಷಣ
ಗಾಯ ಪೂರ್ಣ ಬಿಚ್ಚಿಕೊಂಡಿತು.
8.ಅವನನ್ನಿನ್ನು ಕಳಕೊಳ್ಳುವದಿಲ್ಲ
ನನ್ನದೆಲ್ಲವನು ಕಳಕೊಂಡೆ
ಎಂಬ ಭಯಕ್ಕೆ.
9.ನದಿಯಾಗಿ ಹರಿಸಿದಳು
ಕಣ್ಣೀರು
ನನ್ನ ಎಚ್ಚರಿಸಲು
ಸಾಯುತ್ತಿರಲ್ಲಿಲ್ಲ ನಾನು
ಒಂದಿಷ್ಟು ಕಣ್ಣೀರು ಹರಿಸಬೇಕಾಗಿತ್ತು
ನನ್ನ ಪಡೆಯಲು.
10.ಒಂದಿಷ್ಟು ಸಲ
ಚದುರಿಕೊಂಡ ನೋಟಗಳು
ಖುಷಿ ಕೊಡುತ್ತವೆ
ನಿನ್ನ ಮುಖ ಚೆಹೆರೆಗೆ
ಮುತ್ತಿಟ್ಟ ಮುಂಗುರುಳು
ಬಿಸಿಯುಸಿರಿನ ಸೊಗಡು ಮತ್ತು
ತುಟಿಯಂಚಿನ ಮುಗುಳ್ನಗೆ.
-ಭಾವಾನುವಾದ
ಅಂಬಾದಾಸ ವಡೆ
ಬಾಗಲಕೋಟೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.